FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Tuesday, 15 October 2024

ಪ್ರೀ ಪ್ರೈಮರಿ ವಿಭಾಗದ ಪುಟಾಣಿ ಆರ್ವಿ ಶೆಟ್ಟಿ ಯ ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ಭರ್ಜರಿ ಊಟ ನೀಡಿದ ಹೆತ್ತವರು :

        ನಮ್ಮ ಶಾಲಾ ಪ್ರೀ ಪ್ರೈಮರಿ ವಿಭಾಗದ ಪುಟಾಣಿ ಆರ್ವಿ ಶೆಟ್ಟಿ ಯ ಹುಟ್ಟು ಹಬ್ಬದ ಪ್ರಯುಕ್ತ ಇಂದು ಅವಳ ತಾಯಿ ಶ್ರೀಮತಿ ಆರತಿ ಶೆಟ್ಟಿ ಹಾಗೂ ಅಜ್ಜ ಅಜ್ಜಿಯರಾದ ಪೊಯ್ಯೇಲು ಶ್ರೀ ಶಶಿಧರ ಶೆಟ್ಟಿ ಹಾಗೂ ಶ್ರೀಮತಿ ಜಲಜ (ನಮ್ಮ ಶಾಲಾ ಅಡುಗೆಯಾಳು) ರವರು ಶಾಲಾ ಮಕ್ಕಳಿಗೆ ಹಾಗೂ ಶಿಕ್ಷಕ ವೃಂದಕ್ಕೆ ಭೂರಿ ಭೋಜನ ನೀಡಿ ಗಮನ ಸೆಳೆದರು. ಜೊತೆಗೆ ಮಕ್ಕಳಿಗೆ ಐಸ್ ಕ್ರೀಂ ನೀಡಿ ಸಂಭ್ರಮಪಟ್ಟರು. 

Monday, 7 October 2024

ಬಾಲಸಭಾದ ಬಾಲಸದಸ್ಸ್ ಕಾರ್ಯಕ್ರಮದ ಬಹುಮಾನ ವಿತರಣೆ :

         ಬಾಲಸಭಾದ ಬಾಲಸದಸ್ಸ್ ಕಾರ್ಯಕ್ರಮದ ಅಂಗವಾಗಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಳೂರು ಶಾಲೆಯ 4 ನೇ ತರಗತಿ ಮಕ್ಕಳಿಗೆ ನಡೆಸಿದ ಪ್ರಶ್ನೆ ಪೆಟ್ಟಿಗೆ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ಇಂದು ನಡೆಯಿತು. 

ಹುಟ್ಟು ಹಬ್ಬದ‌ ಪ್ರಯುಕ್ತ ಸಹಪಾಠಿಗಳಿಗೆ ಕಲಿಕಾ ಸಾಮಾಗ್ರಿ ಹಾಗೂ ಶಾಲಾ ಹೂದೋಟಕ್ಕೆ ಹೂ ಗಿಡಗಳ ಕೊಡುಗೆ ನೀಡಿದ ಪ್ರೀ ಪ್ರೈಮರಿ ವಿಭಾಗದ ಲಿಹಾನ್ ಜೆ. ಪಿ. :

          ಪ್ರೀ ಪ್ರೈಮರಿ ವಿಭಾಗದ ಪುಟಾಣಿ ಲಿಹಾನ್ ಜೆ.ಪಿ. ತನ್ನ ಹುಟ್ಟು ಹಬ್ಬದ ಪ್ರಯುಕ್ತ ತನ್ನ ಸಹಪಾಠಿಗಳಿಗೆ ಕಲರಿಂಗ್ ಪುಸ್ತಕ ಮತ್ತು ಕ್ರೆಯೋನ್ಸ್ ನೀಡಿ ಸಂಭ್ರಮಪಟ್ಟನು. 

Wednesday, 2 October 2024

ಕುಳೂರು ಶಾಲೆಯಲ್ಲಿ ಗಾಂಧೀಜಿ ಹಾಗೂ ಶಾಸ್ತ್ರೀಜಿ ಜಯಂತಿ ಆಚರಣೆ ; ಸ್ವಚ್ಚತಾ ಕಾರ್ಯಕ್ರಮ :

        ರಾಷ್ಟ್ರಪಿತ ಮೋಹನ್ ದಾಸ್ ಕರಮಚಂದ ಗಾಂಧೀಜಿಯವರ 155 ಜನ್ಮ ದಿನಾಚರಣೆ ಹಾಗೂ ಮಾಜಿ ಪ್ರಧಾನಿ ಲಾಲ್ ಬಹುದೂರ್ ಶಾಸ್ತ್ರಿಯವರ 120 ನೇ ಜನ್ಮದಿನಾಚರಣೆಯ ಪ್ರಯುಕ್ತ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು. 

Friday, 13 September 2024

ಕುಳೂರು ಶಾಲೆಯಲ್ಲಿ ಸಂಭ್ರಮದ ಓಣಂ ಆಚರಣೆ :

        ಕುಳೂರಿನ‌ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇರಳದ ನಾಡ ಹಬ್ಬವಾದ ಓಣಂ ಆಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

Thursday, 12 September 2024

ಕುಳೂರು‌ ಶಾಲೆಗೆ ಡಯೆಟಿನ ನಿವೃತ್ತ ಹಿರಿಯ ಪ್ರಾಧ್ಯಾಪಕರಾದ ಯು. ಪುರುಶೋತ್ತಮ ದಾಸ್ ಭೇಟಿ :

        ನಮ್ಮ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಳೂರಿನ ಬಗ್ಗೆ ವಿವಿಧ ಮಾಧ್ಯಮಗಳ ಮೂಲಕ ಶಾಲೆಯ ಅಭಿವೃದ್ಧಿಯನ್ನು ತಿಳಿದು ಡಯೆಟ್ ಮಾಯಿಪ್ಪಾಡಿಯ ನಿವೃತ್ತ ಹಿರಿಯ ಪ್ರಾಧ್ಯಾಪಕರಾದ ಶ್ರೀಯುತ ಯು. ಪುರುಷೋಮ ದಾಸ್ ರವರು ಇಂದು ಶಾಲೆಗೆ ಭೇಟಿ ನೀಡಿ  ಶಾಲಾಭಿವೃದ್ಧಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 

Tuesday, 10 September 2024

ಹುಟ್ಟು ಹಬ್ಬದ ಪ್ರಯುಕ್ತ ತನ್ನ ತರಗತಿಯ ಎಲ್ಲಾ ಸಹಪಾಠಿಗಳಿಗೆ ಪೆನ್ಸಿಲ್ ಹಾಗೂ ಶಾಲೆಯ ಎಲ್ಲಾ ತರಗತಿಗಳಿಗೆ ಲರ್ನಿಂಗ್ ಚಾರ್ಟ್ ನೀಡಿದ ದ್ರುವಿ

        ಪ್ರೀ ಪ್ರೈಮರಿ ವಿಭಾಗದ ವಿದ್ಯಾರ್ಥಿನಿ ಕುಮಾರಿ ದ್ರುವಿ ತನ್ನ ಹುಟ್ಟು ಹಬ್ಬದ ಪ್ರಯುಕ್ತ ತನ್ನ ತರಗತಿಯ ಎಲ್ಲಾ ಸಹಪಾಠಿಗಳಿಗೆ ಪೆನ್ಸಿಲ್ ಹಾಗೂ ಶಾಲೆಯ ಎಲ್ಲಾ ತರಗತಿಗಳಿಗೆ ಲರ್ನಿಂಗ್ ಚಾರ್ಟ್ ನೀಡುವ ಮೂಲಕ ಗಮನ ಸೆಳೆದಳು. ದ್ರುವಿಗೆ ಹುಟ್ಟು ಹಬ್ಬದ ಶುಭಾಶಯಗಳು.