FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Saturday, 29 June 2019

ತರಕಾರಿ ಕೃಷಿ ಮಾಡಲು ಶ್ರಮದಾನ

        ಶಾಲಾ ಪರಿಸರದಲ್ಲಿ ತರಕಾರಿ ಕೃಷಿ ಮಾಡುವ ಸಲುವಾಗಿ ಶಾಲಾ ರಕ್ಷಕ-ಶಿಕ್ಷಕ ಸಂಘ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸದಸ್ಯರಿಂದ ಶ್ರಮದಾನ ನಡೆಯಿತು. ಶ್ರಮದಾನದಲ್ಲಿ ಹಳೆ ವಿದ್ಯಾರ್ಥಿ ಸಂಘದ ಚಿಕ್ಕಪ್ಪ ಶೆಟ್ಟಿ ಎಲಿಯಾಣ, ಹರಿರಾಮ ಕುಳೂರು, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ, ಉಪಾಧ್ಯಕ್ಷ ಕಮಲಾಕ್ಷ ಕಲ್ಕಾರ್, ಸದಸ್ಯರಾದ ಸುಪ್ರೀತ ಕುಳೂರು ಹೊಸಮನೆ, ರೂಪ ಕುಳೂರು ಪಾದೆ, ಉದಯಕುಮಾರಿ ಕುಳೂರು, ಬೇಬಿ ಕುಳೂರು, ಜಗದೀಶ್ ಆಳ್ವ ದೇರಂಬಳ ಹಾಗೂ ಶಾಲಾ ಶಿಕ್ಷಕ-ಶಿಕ್ಷಕಿ ವೃಂದ ಭಾಗವಹಿಸಿದ್ದರು.









Friday, 28 June 2019

ಗ್ರಂಥಾಲಯ ಭೇಟಿ

        ನಮ್ಮ ಕುಳೂರು ಶಾಲಾ ಮಕ್ಕಳು ವಾಚನಾ ಸಪ್ತಾಹದ ಪ್ರಯುಕ್ತ ತಾ. 28-06-2019 ನೇ ಶುಕ್ರವಾರದಂದು ಚಿನಾಲದಲ್ಲಿರುವ ನವಯುವಕ ಕಲಾ ವೃಂದ ಗ್ರಂಥಾಲಯಕ್ಕೆ ಭೇಟಿ ನೀಡಿ ಪುಸ್ತಕ ಪ್ರದರ್ಶನವನ್ನು ವೀಕ್ಷಿಸಿದರು.




Wednesday, 26 June 2019

2019-20 ಶಾಲಾ ಚುನಾವಣೆಗೆ ನಾಮಪತ್ರ ಸಲ್ಲಿಕೆ

     ಇದೇ ಸೋಮವಾರ (01-07-2019) ದಂದು ನಡೆಯುವ 2019-20 ನೇ ಶೈಕ್ಷಣಿಕ ವರ್ಷದ ಶಾಲಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುವ ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮಾ ರವರಿಗೆ ಇಂದು ನಾಮಪತ್ರ ಸಲ್ಲಿಸಿದರು.





ಮಾದಕ ವಸ್ತು ವಿರೋಧಿ ದಿನಾಚರಣೆ

        ನಮ್ಮ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆಯನ್ನು ಆಚರಿಸಲಾಯಿತು.
     ಆ ಪ್ರಯುಕ್ತ ವಿಶೇಷ ಅಸೆಂಬ್ಲಿ ನಡೆಸಲಾಯಿತು. ಶಾಲಾ ಶಿಕ್ಷಕಿ ಸೌಮ್ಯ ಪಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು. ಬಳಿಕ ಶಾಲಾ ಶಿಕ್ಷಕಿ ನಯನ ಯಂ ರವರು ಶಾಲಾ ಮಕ್ಕಳಲ್ಲಿ ಮಾದಕ ವಸ್ತುಗಳ ವಿರುದ್ಧ ಪ್ರತಿಜ್ಞೆಯನ್ನು ಮಾಡಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮಾ ಪಿ, ಅಧ್ಯಾಪಕ ಜಯಪ್ರಶಾಂತ್ ಪಾಲೆಂಗ್ರಿ, ಅಶ್ವಿನಿ ಎಲಿಯಾಣ, ರಮೀಝ ಉಪಸ್ಥಿತರಿದ್ದರು.




Monday, 24 June 2019

ರಕ್ಷಕ-ಶಿಕ್ಷಕ ಸಂಘದ ಮಹಾಸಭೆ


       ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2019-20 ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ಮಹಾಸಭೆಯನ್ನು ಕರೆಯಲಾಯಿತು.
       ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಪ್ರಮೋದ್ ಶೆಟ್ಟಿ ಸಾಲೆದಪಡ್ಪು ವಹಿಸಿದ್ದರು. ಪಿ. ಟಿ. ಎ ಮಾತೃ ಮಂಡಳಿಯ ಅಧ್ಯಕ್ಷೆ ಆಶಾಲತ ಕುಳೂರು, ಪ್ರೀ ಪ್ರೈಮರಿ ವಿಭಾಗದ ಪಿ. ಟಿ. ಎ ಅಧ್ಯಕ್ಷ ಕಮಲಾಕ್ಷ ಕಲ್ಕಾರ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. 2018-19 ನೇ ಸಾಲಿನ ವರದಿಯನ್ನು ಶಿಕ್ಷಕಿ ನಯನ ಯಂ ಮಂಡಿಸಿದರು. ಲೆಕ್ಕ ಪತ್ರವನ್ನು ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ಮಂಡಿಸಿದರು. ಇದೇ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಶಾಲಾ ರಕ್ಷಕ-ಶಿಕ್ಷಕ ಸಂಘದ ನೇತೃತ್ವದಲ್ಲಿ ನಡೆಸಿದ ತರಕಾರಿ ಕೃಷಿ ಹಾಗೂ ಇತರ ಆದಾಯ ಮೂಲಗಳಿಂದ ಗಳಿಸಿದ ಸುಮಾರು ಒಂದು ಲಕ್ಷಕ್ಕಿಂತಲೂ ಅಧಿಕ ಮೊತ್ತವನ್ನು ಶಾಲಾಭಿವೃದ್ಧಿಗೆ ವಿನಿಯೋಗಿಸಿದ ಶಾಲಾ ರಕ್ಷಕ-ಶಿಕ್ಷಕ ಸಂಘವನ್ನು ಅಭಿನಂದಿಸಲಾಯಿತು. ಜೊತೆಗೆ ಈ ಕಾರ್ಯದಲ್ಲಿ ಸಹಕರಿಸಿದ ಪೂರ್ವ ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಹರಿರಾಮ ಕುಳೂರು ರವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
        ಇದೇ ಸಂದರ್ಭದಲ್ಲಿ 2019-20 ನೇ ಶೈಕ್ಷಣಿಕ ವರ್ಷದ ನೂತನ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಜಯರಾಜ್ ಶೆಟ್ಟಿ ಚಾರ್ಲ, ಉಪಾಧ್ಯಕ್ಷರಾಗಿ ಕಮಲಾಕ್ಷ ಕಲ್ಕಾರ್ ಅವಿರೋಧವಾಗಿ ಆಯ್ಕೆಯಾದರು. ಸದಸ್ಯರಾಗಿ ಪ್ರೇಮ ಜಿ ಶೆಟ್ಟಿ, ಆಶಾಲತ ಕುಳೂರು, ಸೌಮ್ಯಲತ ಕುಳಿಂಜ, ಸುಪ್ರೀತ ಕುಳೂರು ಹೊಸಮನೆ, ರೇಷ್ಮ ಕುಳೂರು, ಹೇಮಲತಾ ಕುಳೂರು, ಸುನೀತಾ ಕುಳೂರು, ಫಾತಿಮತ್ ಝೌರ, ರಾಜಲಕ್ಷ್ಮಿ ದೇರಂಬಳ ಗುತ್ತು, ಸ್ವಾತಿ ದೇರಂಬಳ, ಲೀಲಾವತಿ, ಯೋಗ್ಯವತಿ, ಯಶೋಧ ಪೊಯ್ಯೆಲ್, ಪುಷ್ಪ ಕುಳೂರು, ಉದಯಕುಮಾರಿ ಕುಳೂರು ರವರು ಆಯ್ಕೆಯಾದರು. ಪಿ. ಟಿ. ಎ ಮಾತೃ ಮಂಡಳಿ ಅಧ್ಯಕ್ಷೆಯಾಗಿ ರಾಜಲಕ್ಷ್ಮಿ ದೇರಂಬಳ ಗುತ್ತು, ಉಪಾಧ್ಯಕ್ಷೆಯಾಗಿ ಸುಪ್ರೀತ ಕುಳೂರು ಹೊಸಮನೆ ಅವಿರೋಧವಾಗಿ ಆಯ್ಕೆಯಾದರು. ಸದಸ್ಯರಾಗಿ ಆಶಾಲತ ಕುಳೂರು, ಸುನೀತಾ ಕುಳೂರು, ಹರಿಣಾಕ್ಷಿ, ಗೀತಾ, ಬೇಬಿ, ರೂಪ, ಯಶೋಧ ಕುಳೂರು , ಝೈನಬ, ರೋಹಿಣಿ, ಕಮಲಾಕ್ಷಿ, ಶೋಭಾ, ಪುಷ್ಪಲತಾ, ಸುಹಾಸಿನಿ ಆಯ್ಕೆಯಾದರು. ಪ್ರೀ ಪ್ರೈಮರಿ ವಿಭಾಗದ ಪಿ.ಟಿ.ಎ ಅಧ್ಯಕ್ಷರಾಗಿ ಸತೀಶ್ ಎಲಿಯಾಣ ಆಯ್ಕೆಯಾದರು. ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಶಿಕ್ಷಕಿ ಸೌಮ್ಯ ಪಿ ವಂದಿಸಿದರು.








ಮಕ್ಕಳಿಗೆ ಉಚಿತ ಬ್ಯಾಗ್ ಹಾಗೂ ಸಮವಸ್ತ್ರ ವಿತರಣೆ

       ನಮ್ಮ ಕುಳೂರಿನಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ರಕ್ಷಕ-ಶಿಕ್ಷಕ ಸಂಘದ ವತಿಯಿಂದ ಶಾಲಾ ಮಕ್ಕಳಿಗೆ ಬ್ಯಾಗ್ ಹಾಗೂ ಶಾಲಾ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಪ್ರೀ ಪ್ರೈಮರಿ ಮಕ್ಕಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮ ನಡೆಯಿತು.
     ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಪ್ರಮೋದ್ ಶೆಟ್ಟಿ ಸಾಲೆದಪಡ್ಪು ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ ಮಾಡಿದರು. ಪ್ರೀ ಪ್ರೈಮರಿ ಮಕ್ಕಳಿಗೆ ಸಮವಸ್ತ್ರ ವಿತರಣೆಯನ್ನು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಕಂಚಿಲರವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮಾತೃ ಮಂಡಳಿಯ ಅಧ್ಯಕ್ಷೆ ಆಶಾಲತ ಕುಳೂರು, ಶಾಲಾ ಪ್ರೀ ಪ್ರೈಮರಿ ವಿಭಾಗದ ಪಿ. ಟಿ.ಎ ಅಧ್ಯಕ್ಷ ಕಮಲಾಕ್ಷ ಕಲ್ಕಾರ್, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಪೊಯ್ಯೆಲ್, ಕೋಶಾಧಿಕಾರಿ ಚಿಕ್ಕಪ್ಪ ಶೆಟ್ಟಿ ಎಲಿಯಾಣ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಲಾ ಪಿ.ಟಿ.ಎ ಗೆ ವಿವಿಧ ಕಾರ್ಯಗಳಲ್ಲಿ ಸಹಕರಿಸಿದ ಹಳೆ ವಿದ್ಯಾರ್ಥಿ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಹರಿರಾಮ ಕುಳೂರು ರವರನ್ನು ಪಿ.ಟಿ.ಎ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮಾ ಸ್ವಾಗತಿಸಿ, ಶಾಲಾ ಶಿಕ್ಷಕಿ ಸೌಮ್ಯ ಪಿ ವಂದಿಸಿದರು. ಅಧ್ಯಾಪಕ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು.













Friday, 21 June 2019

ವಿಶ್ವ ಯೋಗ ದಿನಾಚರಣೆ


      ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು.
       ಆ ಪ್ರಯುಕ್ತ ವಿಶೇಷ ಅಸೆಂಬ್ಲಿ ನಡೆಸಿ ಅಧ್ಯಾಪಕರಾದ ಜಯಪ್ರಶಾಂತ್ ಪಾಲೆಂಗ್ರಿ ಯೋಗ ದಿನಾಚರಣೆಯ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು. ಬಳಿಕ ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮಾ ರವರು ಕೆಲವು ಸರಳ ವ್ಯಾಯಾಮ ಹಾಗೂ ಯೋಗಾಸನಗಳನ್ನು ಪ್ರದರ್ಶನ ಮಾಡುವ ಮೂಲಕ ಮಕ್ಕಳಿಗೆ ತಿಳಿಸಿಕೊಟ್ಟರು. ಶಾಲಾ ಶಿಕ್ಷಕರಿಯರಾದ ಸೌಮ್ಯ ಪಿ, ನಯನ ಯಂ, ಅಶ್ವಿನಿ ಎಲಿಯಾಣ, ರಮೀಝ ಉಪಸ್ಥಿತರಿದ್ದು ಸಹಕರಿಸಿದರು.










Wednesday, 19 June 2019

ವಾಚನಾ ದಿನಾಚರಣೆ

       ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಚನಾ ದಿನವನ್ನು ಆಚರಿಸಲಾಯಿತು.
       ಆ ಪ್ರಯುಕ್ತ ಪುಸ್ತಕ ಪ್ರದರ್ಶನ ನಡೆಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮಾ ರವರು ಪಿ. ಎನ್. ಪಣಿಕ್ಕರ್ ರವರ ಜೀವನ ಚರಿತ್ರೆಯನ್ನು ಮಕ್ಕಳಿಗೆ ತಿಳಿಸುವುದರೊಂದಿಗೆ ಮಕ್ಕಳಿಗೆ ಕೆಲವು ಪುಸ್ತಕಗಳ ಪರಿಚಯ ಮಾಡಿಸಿದರು. ಆ ಮೂಲಕ ಪಿ. ಎನ್.  ಪಣಿಕ್ಕರ್ ರವರ ಚರಮ ದಿನವನ್ನು ವಾಚನಾ ದಿನವಾಗಿ ಆಚರಿಸುವ ಮೂಲಕ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಲು ಪ್ರಚೋದನೆ ನೀಡಲಾಯಿತು. ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು. ಶಾಲಾ ಶಿಕ್ಷಕರಾದ ಜಯಪ್ರಶಾಂತ್ ಪಾಲೆಂಗ್ರಿ, ಶಿಕ್ಷಕಿಯರಾದ ಸೌಮ್ಯ ಪಿ, ಅಶ್ವಿನಿ ಎಲಿಯಾಣ, ರಮೀಝ ಉಪಸ್ಥಿತರಿದ್ದು ಸಹಕರಿಸಿದರು.


 



Tuesday, 18 June 2019

ರಕ್ಷಕ-ಶಿಕ್ಷಕ ಸಂಘದ ಕಾರ್ಯಕಾರಿ ಸಭೆ

        2018-19 ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿ ಸಭೆಯು ತಾ. 18-06-2019 ಮಂಗಳವಾರದಂದು ನಡೆಯಿತು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಪ್ರಮೋದ್ ಶೆಟ್ಟಿ ಸಾಲೆದಪಡ್ಪು ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಹಿಂದಿನ ಕಾರ್ಯಚಟುವಟಿಕೆಗಳ ಕುರಿತು ಮೆಲುಕು ಹಾಕಿ, ಲೆಕ್ಕಾಚಾರವನ್ನು ಮಂಡಿಸಲಾಯಿತು. ರಕ್ಷಕ-ಶಿಕ್ಷಕ ಸಂಘದ ಮಹಾಸಭೆಯ ದಿನಾಂಕವನ್ನು ನಿಗದಿ ಪಡಿಸಲಾಯಿತು.


Friday, 14 June 2019

ಹಳೆ ವಿದ್ಯಾರ್ಥಿ ಸಂಘದ ಸಭೆ

         ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ಹಾಗೂ ಪ್ರೀ ಪ್ರೈಮರಿ ಮಕ್ಕಳಿಗೆ ಸಮವಸ್ತ್ರ ನೀಡುವ ಸಲುವಾಗಿ ಹಳೆ ವಿದ್ಯಾರ್ಥಿ ಸಂಘದ ಕಾರ್ಯಕಾರಿ ಸಮಿತಿ ಸಭೆಯು ತಾ. 14-06-2019 ನೇ ಶುಕ್ರವಾರದಂದು ಕರೆಯಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ರಕ್ಷಕ-ಶಿಕ್ಷಕ ಸಂಘವು ಶಾಲಾ ಮಕ್ಕಳಿಗೆ ಬ್ಯಾಗ್ ಹಾಗೂ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಪ್ರೀ ಪ್ರೈಮರಿ ಮಕ್ಕಳಿಗೆ ಸಮವಸ್ತ್ರ ನೀಡುವ ತೀರ್ಮಾನವನ್ನು ಕೈಗೊಳ್ಳಲಾಯಿತು.


Friday, 7 June 2019

ಸಮವಸ್ತ್ರ ವಿತರಣೆ

        ಶಾಲಾ ಮಕ್ಕಳಿಗೆ ಸರಕಾರದ ವತಿಯಿಂದ ಲಭಿಸಿದ ಉಚಿತ ಸಮವಸ್ತ್ರವನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಪ್ರಮೋದ್ ಶೆಟ್ಟಿ ಸಾಲೆದಪಡ್ಪು ರವರು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕ ಸತ್ಯನಾರಾಯಣ ಶರ್ಮಾ, ಜಯರಾಜ್ ಶೆಟ್ಟಿ ಚಾರ್ಲ ಉಪಸ್ಥಿತರಿದ್ದರು.