FLASH NEWS
Thursday, 30 July 2020
Tuesday, 28 July 2020
ಲಾಕ್ ಡೌನ್ ಸಮಯದಲ್ಲಿ ತರಕಾರಿ ಕೃಷಿಗೆ ಹಳೆ ವಿದ್ಯಾರ್ಥಿಗಳ ಶ್ರಮದಾನ
ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳು ಲಾಕ್ ಡೌನ್ ಸಮಯದಲ್ಲಿ ಶಾಲೆಯಲ್ಲಿ ಶ್ರಮದಾನ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.
ಕೊರೋನ ಮಹಾಮಾರಿಯಿಂದ ಸ್ತಬ್ಧವಾಗಿರುವ ಶಾಲೆಯು ಸರಕಾರದ ಸುಭೀಕ್ಷ ಕೇರಳ ಯೋಜನೆಯಂತೆ ಸ್ಥಳೀಯವಾಗಿ ತರಕಾರಿ ಕೃಷಿ ಮಾಡಲು ಪ್ರೇರೇಪಣೆ ನೀಡಿದಂತೆ ವರ್ಷಂಪ್ರತಿಯಂತೆ ಕುಳೂರು ಶಾಲೆಯಲ್ಲಿ ತರಕಾರಿ ಕೃಷಿ ಮಾಡುವ ಯೋಜನೆಗೆ ಶ್ರಮದಾನ ಮಾಡಲಾಯಿತು. ಈ ಶ್ರಮದಾನದಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳು ಕೈ ಜೋಡಿಸಿ ಯಶಸ್ಸುಗೊಳಿಸಿದರು. ಶಾಲಾ ರಕ್ಷಕ-ಶಿಕ್ಷಕ ಸಂಘ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಸಕ್ರಿಯವಾಗಿರುವ ಕುಳೂರು ಶಾಲೆಯಲ್ಲಿ ಈ ವರ್ಷದ ತರಕಾರಿ ಕೃಷಿ ತೋಟ ನಿರ್ಮಾಣದಲ್ಲಿ ಪಾಲ್ಗೊಂಡು ಸೈ ಎಣಿಸಿದರು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ ಮತ್ತು ಹಳೆ ವಿದ್ಯಾರ್ಥಿ ಸಂಘದ ಸಕ್ರಿಯ ಸದಸ್ಯ ಹರಿರಾಮ ಕುಳೂರು ಶ್ರಮದಾನದ ನೇತೃತ್ವ ವಹಿಸಿದರು. ಮಧ್ಯಾಹ್ನದ ಊಟದ ಸಮಯದಲ್ಲಿ ಹಳೆ ವಿದ್ಯಾರ್ಥಿ ಸಂಘದ ಜತೆ ಕಾರ್ಯದರ್ಶಿ ಅಬ್ದುಲ್ ಮಜೀದ್ ಸಾಹೇಬ್ ಚಾರ್ಲರವರ ಚಿಕನ್ ಪದಾರ್ಥ ಎಲ್ಲರ ಬಾಯಿಯನ್ನು ಚಪ್ಪರಿಸುವಂತೆ ಮಾಡಿತು. ಇವರೆಲ್ಲರಿಗೂ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದೆ.

Thursday, 16 July 2020
Subscribe to:
Posts (Atom)