ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಕುಂಬಳೆ ಇದರ ಅಂಗವಾದ ಶ್ರೀ ನಿತ್ಯಾನಂದ ನವಜೀವನ ಸ್ವ-ಸಹಾಯ ಸಂಘ, ಕುಳೂರು ಇದರ ಎರಡನೇ ವಾರ್ಷಿಕೋತ್ಸವದ ಸಲುವಾಗಿ ನಮ್ಮೀ ಕುಳೂರು ಶಾಲೆಯಲ್ಲಿ 'ಕೈ ತೋಟ ನಿರ್ಮಾಣ ಮತ್ತು ಸ್ಸಚ್ಛತಾ ಕಾರ್ಯಕ್ರಮವು ತಾ. 28-08-2016 ನೇ ಆದಿತ್ಯವಾರದಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ನ್ಯಾಯವಾದಿ ಶ್ರೀ ಗಂಗಾಧರ ಕೊಂಡೆವೂರುರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಾರ್ಡ್ ಸದಸ್ಯೆ ಶ್ರೀಮತಿ ಚಂದ್ರಾವತಿ ವಿ.ಪಿ, ಯೋಜನಾಧಿಕಾರಿ ಶ್ರೀಮತಿ ಸಂಧ್ಯಾ ಶೆಟ್ಟಿ, ನಾರಾಯಣ ನೈಕ್, ಶ್ರೀ ಚಂಚಲಾಕ್ಷ, ಶ್ರೀ ಮೋನಪ್ಪ ಪೂಜಾರಿ ಕಲ್ಕಾರ್, ಶ್ರೀ ಶುಭಾನಂದ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ವಿನೋದ್ ಕುಮಾರ್ ಬಿ, ಶಾಲಾ ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಸೌಮ್ಯಲತಾ, ಶಾಲಾ ಮಾತೃ ಸಂಘದ ಅದ್ಯಕ್ಷೆ ಶ್ರೀಮತಿ ಮಮತಾ ಉಪಸ್ಥಿತರಿದ್ದರು. ಕೈತೋಟದಲ್ಲಿ ವಾರ್ಡ್ ಸದಸ್ಯೆ ಶ್ರೀಮತಿ ಚಂದ್ರಾವತಿರವರು ತರಕಾರಿ ಗಿಡ ನೆಡುವ ಮೂಲಕ ಕೈತೋಟ ನಿರ್ಮಾಣಕ್ಕೆ ಚಾಲನೆ ನೀಡಿದರು. ಶಾಲಾ ಅಧ್ಯಾಪಿಕೆ ಶ್ರೀಮತಿ ಸೌಮ್ಯ ಪಿ ಸ್ವಾಗತಿಸಿ, ಶ್ರೀ ಪ್ರಮೋದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
No comments:
Post a Comment