ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಯನ್ನು ಸಡಗರದಿಂದ ಆಚರಿಸಲಾಯಿತು. ಆ ಪ್ರಯುಕ್ತ ಆಕರ್ಷಕ ಗೋದಳಿ ಹಾಗೂ 'ಕ್ರಿಸ್ಮಸ್ ಟ್ರೀ' ರಚಿಸಲಾಗಿತ್ತು. ವಿದ್ಯಾರ್ಥಿ ದುರ್ಗಾಪ್ರಸಾದ್ ಹಾಕಿದ ಕ್ರಿಸ್ಮಸ್ ಅಜ್ಜನ ವೇಷ ಎಲ್ಲರ ಗಮನ ಸೆಳೆಯಿತು. ಕ್ರಿಸ್ಮಸ್ ಅಜ್ಜ ಕ್ರಿಸ್ಮಸ್ ಹಬ್ಬದ ಶುಭಾಶಯ ಹೇಳಿ ಎಲ್ಲರಿಗೂ ಸಿಹಿತಿಂಡಿಯನ್ನು ಹಂಚಿದರು. ಬಳಿಕ ಎಲ್ಲರಿಗೂ ಕ್ರಿಸ್ಮಸ್ ಕೇಕ್ ವಿತರಿಸಲಾಯಿತು. ಮಧ್ಯಾಹ್ನ ಪಾಯಸದೂಟವನ್ನು ಮಾಡಲಾಯಿತು. ಶಾಲಾ ಅಧ್ಯಾಪಕ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ, ಅಧ್ಯಾಪಿಕೆಯರಾದ ಶ್ರೀಮತಿ ಸೌಮ್ಯ ಪಿ, ಕುಮಾರಿ ರೇಷ್ಮ, ಕುಮಾರಿ ಶ್ವೇತ ಉಪಸ್ಥಿತರಿದ್ದು ಸಹಕರಿಸಿದರು.
No comments:
Post a Comment