ಮೀಂಜ ಪಂಚಾಯತ್ ಮಟ್ಟದ ಕೇರಳ ಸರಕಾರದ ಹಸಿರು ಕೇರಳ ಕರ್ಮ ಪದ್ಧತಿಯ ಹಸಿರು ಕೇರಳ ಮಿಷನ್ ಕಾರ್ಯಕ್ರಮದಂಗವಾಗಿ ಮಾಲಿನ್ಯದಿಂದ ಸ್ವಾತಂತ್ರ್ಯ- ಸಮಗ್ರ ಶುಚಿತ್ವ ಪದ್ಧತಿಯಂಗವಾಗಿ ವಾರ್ಡ್ ಮಟ್ಟದ ಶುಚಿತ್ವ ಸಂಗಮವು ನಮ್ಮ ಕುಳೂರು ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ವಾರ್ಡ್ ಸದಸ್ಯೆ ಶ್ರೀಮತಿ ಚಂದ್ರಾವತಿ ವಿ.ಪಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಾಲಾ ಪಿ.ಟಿ.ಎ ಅಧ್ಯಕ್ಷ ಶ್ರೀ ಪ್ರಮೋದ್ ಶೆಟ್ಟಿ ಶಾಲೆದಪಡ್ಪು ವಹಿಸಿದ್ದರು. ಕಾರ್ಯಕ್ರಮದಲ್ಲಿ ಪಂಚಾಯತ್ ಪ್ರತಿನಿಧಿಯಾದ ಅಬ್ದುಲ್ ಸಮದ್, ಪಂಚಾಯತ್ ಯೂತ್ ಕೋ-ಓರ್ಡಿನೇಟರ್ ಶ್ರೀ ಇಬ್ರಾಹಿಂ ಹೊನ್ನಕಟ್ಟೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಕಂಚಿಲ, ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಆಶಾಲತಾ ಕುಳೂರು, ಉದ್ಯಮಿ ಶ್ರೀ ಪಿ.ಆರ್.ಶೆಟ್ಟಿ, ಶ್ರೀ ನಾರಾಯಣ ನೈಕ್ ನಡುಹಿತ್ಲು, ಮಾಜಿ ವಾರ್ಡ್ ಸದಸ್ಯ ಶ್ರೀ ಬಾಲಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮದಂಗವಾಗಿ ಸಂದೇಶವನ್ನು ವಾರ್ಡ್ ಸದಸ್ಯೆ ಓದಿದರು. ಕತ್ತಲೆಯಿಂದ ಬೆಳಗಿನೆಡೆಗೆ ಎಂಬಂತೆ ಅತಿಥಿಗಳು ಕ್ಯಾಂಡಲನ್ನು ಉರಿಸಿದರು.
No comments:
Post a Comment