ಉದಿನೂರು ಸರಕಾರಿ ಹೈಯರ್ ಸೆಕಂಡರಿ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಶಾಸ್ತ್ರೋತ್ಸವದಲ್ಲಿ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳು ಅಪ್ರತಿಮ ಸಾಧನೆಗೈದು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ತಾಳೆಗರಿಯ ಉತ್ಪನ್ನಗಳ ನಿರ್ಮಾಣದಲ್ಲಿ ವರ್ಷ ಬಿ 'ಎ' ಗ್ರೇಡ್'ನೊಂದಿಗೆ ದ್ವಿತೀಯ ಸ್ಥಾನ, ವಾಲಿಬಾಲ್ ನೆಟ್ ನಿರ್ಮಾಣದಲ್ಲಿ ಹೇಮಂತ್ 'ಎ' ಗ್ರೇಡ್'ನೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ. ತೆಂಗಿನ ಗೆರಟೆಯ ಉತ್ಪನ್ನಗಳ ನಿರ್ಮಾಣದಲ್ಲಿ ಲಕ್ಷ್ಮಣ 'ಎ' ಗ್ರೇಡ್, ಬರೆಯುವ ಚೋಕ್ ನಿರ್ಮಾಣದಲ್ಲಿ ಶ್ರೇಯಾ ಕರ್ಕೇರ 'ಎ' ಗ್ರೇಡ್ ಹಾಗೂ ಮೆಟಲ್ ಎಂಗ್ರೇವಿಂಗ್'ನಲ್ಲಿ ಶ್ರವಣ್ ಕುಮಾರ್ 'ಎ' ಗ್ರೇಡ್ ಪಡೆದಿದ್ದಾರೆ. ಎಲ್. ಪಿ ವಿಭಾಗದ ವೃತ್ತಿ ಪರಿಚಯ ಮೇಳದಲ್ಲಿ ಒಟ್ಟು 1317 ಅಂಕಗಳನ್ನು ಪಡೆದು ಜಿಲ್ಲೆಯಲ್ಲೇ 9 ನೇ ಸ್ಥಾನ ಪಡೆದು ಅಪ್ರತಿಮ ಸಾಧನೆಗೈದಿದ್ದಾರೆ. ಈ ಪ್ರತಿಭೆಗಳನ್ನು ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ, ಶಾಲಾ ರಕ್ಷಕ-ಶಿಕ್ಷಕ ಸಂಘ, ಶಾಲಾ ಮಾತೃ ಸಂಘ, ಶಾಲಾ ಹಳೆ ವಿದ್ಯಾರ್ಥಿ ಸಂಘ, ಶಾಲಾಭಿವೃದ್ಧಿ ಸಮಿತಿ ಹಾಗೂ ಊರವರು ಅಭಿನಂದಿಸಿದ್ದಾರೆ.

ವರ್ಷ ಬಿ
ಹೇಮಂತ್
ಲಕ್ಷ್ಮಣ
ಶ್ರೇಯಾ ಕರ್ಕೇರ
ಶ್ರವಣ್ ಕುಮಾರ್
No comments:
Post a Comment