ಕೃಷಿಯೆಂದರೆ ಮಾರು ದೂರ ಉಳಿಯುವ ಇಂದಿನ ಯುವಪೀಳಿಗೆಯನ್ನು ನಾಚಿಸುವಂತೆ ಬಾಲಕನೊಬ್ಬ ತನ್ನ ಮನೆಯಂಗಳದಲ್ಲಿ ಇರುವ ಸ್ವಲ್ಪವೇ ಜಾಗದಲ್ಲಿ ಕೃಷಿ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಕುಳೂರು ಆದರ್ಶ ನಗರದ ಲಿಂಗಪ್ಪ ದಾಸ್ ಹಾಗೂ ಸುಜಾತಾ ದಂಪತಿಯ ಪುತ್ರನಾಗಿರುವ ದುರ್ಗಾಪ್ರಸಾದ್ ತನ್ನ ಮನೆಯಂಗಳದಲ್ಲಿ ಭತ್ತ ಹಾಗೂ ತರಕಾರಿ ಕೃಷಿಯನ್ನು ಮಾಡಿ ಸೈ ಎನಿಸಿಕೊಂಡಿರುವನು. ಮನೆಯವರ ಹಾಗೂ ಶಾಲಾ ಅಧ್ಯಾಪಕರ ಸಲಹೆ ಸಹಕಾರದೊಂದಿಗೆ ಶಾಲೆಯಲ್ಲಿ ಸಿಕ್ಕಿದ ತರಕಾರಿ ಬೀಜ ಹಾಗೂ ಭತ್ತವನ್ನು ತಾನೊಬ್ಬನೇ ವ್ಯವಸ್ಥಿತವಾಗಿ ಬೀಜ ಬಿತ್ತಿ, ನೀರುಣಿಸಿ, ಫಲ ಬರುವ ವರೆಗೆ ಪೋಷಿಸಿ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದ್ದಾನೆ. ತಾನು ಬೆಳೆಸಿದ ತರಕಾರಿ ಗಿಡಗಳಿಂದ ಫಸಲನ್ನು ಹೆತ್ತವರಿಗೆ ನೀಡಿದಾಗ ಮಗನ ಈ ಕೈಂಕರ್ಯಕ್ಕೆ ಅವರು ತಲೆದೂಗಿದರು. ಕೇವಲ ಕೃಷಿಯ ಆಸಕ್ತಿ ಮಾತ್ರವಲ್ಲದೆ ಚಿತ್ರಕಲೆಯಲ್ಲೂ ತನ್ನ ಪ್ರತಿಭೆಯನ್ನು ತೋರಿಸಿದ ಈತ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿಯಾಗಿರುವನು. ಇತ್ತೀಚೆಗೆ ಶಾಲೆಯ ಮಕ್ಕಳು ಹಾಗೂ ಅಧ್ಯಾಪಕ ವೃಂದ ಕೃಷಿ ತೋಟಕ್ಕೆ ಭೇಟಿ ನೀಡಿ ಪ್ರೋತ್ಸಾಹಿಸಿದರು. ಈತನ ಈ ಸಾಧನೆಗೆ ಎಲ್ಲರಿಂದಲೂ ಮೆಚ್ಚುಗೆ ಗಳಿಸಿರುವನು.
No comments:
Post a Comment