ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕುಳೂರಿನಲ್ಲಿ 2020-21 ನೇ ಶೈಕ್ಷಣಿಕ ವರ್ಷದ ಶಾಲಾ ಮಕ್ಕಳ ದಾಖಲಾತಿ ಆರಂಭಗೊಂಡಿದೆ. ಪ್ರೀ ಪ್ರೈಮರಿಯಿಂದ ಹಿಡಿದು ಒಂದರಿಂದ ನಾಲ್ಕನೇ ತರಗತಿವರೆಗೆ ಆನ್ಲೈನ್ ಮೂಲಕ ದಾಖಲಾತಿ ಮಾಡಬಹುದು. ಕೆಳಗೆ ನೀಡಿರುವ ಲಿಂಕ್ ಮೂಲಕ ಹೋಗಿ ಮಗುವಿನ ಜನನ ಪ್ರಮಾಣ ಪತ್ರದಲ್ಲಿರುವಂತೆ ಸರಿಯಾದ ವಿವರಗಳನ್ನು ನೀಡಿ ಮನೆಯಲ್ಲೇ ಕುಳಿತು ದಾಖಲಾತಿ ಮಾಡಬಹುದು. ಆ ನಂತರ ಸಮಯ ಇರುವಾಗ ಶಾಲೆಗೆ ಬಂದು ಮಗುವಿನ ಜನ್ಮ ದಿನಾಂಕ ಪ್ರಮಾಣ ಪತ್ರ ಹಾಗೂ ಆಧಾರ್ ಕಾರ್ಡ್ ತಂದು ಕೊಟ್ಟರೆ ಸಾಕು.
ಕೊರೋನದ ಈ ಸಂದಿಗ್ಧ ಸ್ಥಿತಿ,
ಸಾಮಾಜಿಕ ಅಂತರದೊಂದಿಗೆ ನಮ್ಮ ಶಾಲಾ ದಾಖಲಾತಿ
ಮನೆಯಲ್ಲೇ ಇರಿ, ಸುರಕ್ಷಿತರಾಗಿರಿ
ಆನ್ಲೈನ್ ದಾಖಲಾತಿಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
No comments:
Post a Comment