ಈಗಿನ ಓನ್ಲೈನ್ ಕ್ಲಾಸುಗಳ ಲಭ್ಯತೆಯ ಕುರಿತು ತಿಳಿಯಲು ಹಾಗೂ ಪರಿಹಾರ ಮಾರ್ಗ ಕಂಡುಕೊಳ್ಳಲು ಕೆಲವು ದಿನಗಳ ಹಿಂದೆ ನಮ್ಮ ಕುಳೂರು ಶಾಲೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರು, ಶಾಲಾ ರಕ್ಷಕ-ಶಿಕ್ಷಕ ಸಂಘ, ಹಳೆ ವಿದ್ಯಾರ್ಥಿ ಸಂಘ, ಕುಟುಂಬಶ್ರೀ, ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನೊಳಗೊಂಡ ಸಭೆ ನಡೆದಾಗ ಈ ಓನ್ಲೈನ್ ಕ್ಲಾಸುಗಳನ್ನು ವೀಕ್ಷಿಸಲು ಸೌಕರ್ಯಗಳು ಇಲ್ಲದಿರುವುದನ್ನು ಕಂಡು ಬದಲಿ ವ್ಯವಸ್ಥೆಗಾಗಿ ರಕ್ಷಕರಲ್ಲಿ ಕೇಳಿದಾಗ ಸ್ಮಾರ್ಟ್ ಫೋನ್ ಇಲ್ಲದವರು ಹತ್ತಿರದ ಮನೆಗಳಲ್ಲಿ ನೋಡುವುದಾಗಿ ಹೇಳಿರುವರು. ಕೆಲವರು ಸ್ಮಾರ್ಟ್ ಫೋನ್ ತೆಗೆಯುವುದಾಗಿ ತಿಳಿಸಿರುವರು. ಹೀಗಾಗಿ ಹೆಚ್ಚಿನ ಎಲ್ಲಾ ಮಕ್ಕಳಿಗೆ ಇದರ ವ್ಯವಸ್ಥೆಯಾಗಿದ್ದು ಒಂದು ಮನೆಯವರಿಗೆ ಮಾತ್ರ ಈ ವ್ಯವಸ್ಥೆ ಮಾಡಲು ಅನಾನುಕೂಲವಾಯಿತು. ಈ ಸಂದರ್ಭದಲ್ಲಿ ಯುವ ಭಾರತಿ ಸೇವಾ ಸಂಘ, (ರಿ.) ಆದರ್ಶ ನಗರ,ಕುಳೂರು ಇದರ ವತಿಯಿಂದ ಸಂಘದ ಸದಸ್ಯರು ಸ್ಮಾರ್ಟ್ ಫೋನ್ ಕೊಡುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು. ಶಿಕ್ಷಣದಿಂದ ವಂಚಿತರಾಗಬಾರದೆಂದು ಯುವ ಭಾರತಿ ಸೇವಾ ಸಂಘದವರು ಇಂದು (24-06-2020) ಸ್ಮಾರ್ಟ್ ಫೋನನ್ನು ಅವರ ಮನೆಗೆ ತಲುಪಿಸಿರುತ್ತಾರೆ. ಅವರಿಗೆ ಶಾಲಾ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇವೆ.
Good work 🚩🚩🚩
ReplyDelete