ಇದೇ ಬರುವ ಸೋಮವಾರದಂದು ನಡೆಯುವ ತ್ರಿಸ್ತರ ಪಂಚಾಯತು ಚುನಾವಣೆಯಲ್ಲಿ ಎರಡು ಬೂತುಗಳನ್ನೊಳಗೊಂಡ ಮತದಾನ ಕೇಂದ್ರಗಳಾಗಿ ಕಾರ್ಯಾಚರಿಸಲಿರುವ ನಮ್ಮ ಕುಳೂರು ಶಾಲೆಯನ್ನು ಚುನಾವಣೆಯ ಕಾರ್ಯ ಚಟುವಟಿಕೆಗಳಿಗೆ ಸಜ್ಜುಗೊಳಿಸಲಾಯಿತು. ಆ ಪ್ರಯುಕ್ತ ಶಾಲಾ ಒಳಾಂಗಣ ಮತ್ತು ಹೊರಾಂಗಣ, ಪೀಠೋಪಕರಣಗಳ ಸ್ವಚ್ಛತಾ ಕಾರ್ಯವು ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯರು ಮತ್ತು ಶಾಲಾ ಸಿಬ್ಬಂದಿ ವರ್ಗದವರಿಂದ ನಡೆಯಿತು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಜಯರಾಜ್ ಶೆಟ್ಟಿ ಚಾರ್ಲ, ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ರಾಜಲಕ್ಷ್ಮಿ ದೇರಂಬಳ ಗುತ್ತು, ಉಪಾಧ್ಯಕ್ಷೆ ಸುಪ್ರೀತ ಪಾದೆ ಹೊಸಮನೆ, ಪ್ರೇಮ ಜಿ ಶೆಟ್ಟಿ ಹಾಗೂ ಶಾಲಾ ಶಿಕ್ಷಕ ವೃಂದ ಈ ಸ್ವಚ್ಛತಾ ಕಾರ್ಯದಲ್ಲಿ ಕೈ ಜೋಡಿಸಿದರು. ಎಲ್ಲರಿಗೂ ಶಾಲಾ ಪರವಾಗಿ ಧನ್ಯವಾದಗಳನ್ನು ಅರ್ಪಿಸಲಾಯಿತು.
No comments:
Post a Comment