ಪ್ರತೀ ವರ್ಷ ಕೃಷಿ ಚಟುವಟಿಕೆಯನ್ನು ಮಾಡುವ ಮೂಲಕ ಮಾದರಿಯಾದ ಕುಳೂರು ಶಾಲೆಯಲ್ಲಿ ಈ ವರ್ಷವೂ ತರಕಾರಿ ಕೃಷಿ ನಡೆಸಲು ತೀರ್ಮಾನಿಸಿ, ಅದರ ಮೊದಲ ಭಾಗವಾಗಿ ಪಿ. ಟಿ. ಎ ನೇತೃತ್ವದಲ್ಲಿ ಶ್ರಮದಾನ ಕಾರ್ಯ ನಡೆಯಿತು.
ಈ ಶ್ರಮದಾನದಲ್ಲಿ ಶಾಲಾ ಪಿ. ಟಿ. ಎ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ, ಮಾತೃ ಪಿ. ಟಿ. ಎ ಉಪಾಧ್ಯಕ್ಷೆ ಸುಪ್ರೀತಾ ಕುಳೂರು ಹೊಸಮನೆ, ಸದಸ್ಯರಾದ ರೂಪ ಕುಳೂರು ಪಾದೆ, ಹಳೆ ವಿದ್ಯಾರ್ಥಿ ಸಂಘದ ಸಕ್ರಿಯ ಸದಸ್ಯರಾದ ಹರಿರಾಮ ಕುಳೂರು, ಅಬ್ದುಲ್ ಮಜೀದ್ ಸಾಹೇಬ್ ಚಾರ್ಲ, ನಂದು ಕುಳೂರು ಹಾಗೂ ಶಾಲಾ ಶಿಕ್ಷಕ ವೃಂದ ಭಾಗವಹಿಸಿದ್ದರು. ಶ್ರಮದಾನದಲ್ಲಿ ಕೈ ಜೋಡಿಸಿದ ಎಲ್ಲರಿಗೂ ಶಾಲಾ ವತಿಯಿಂದ ಧನ್ಯವಾದ ಸಲ್ಲಿಸಲಾಯಿತು.
No comments:
Post a Comment