ಕೊರೋನ ಕಾರಣದಿಂದಾಗಿ ಕಳೆದ ಒಂದೂವರೆ ವರ್ಷಗಳಲ್ಲಿ ಶಾಲಾ ಕಲಿಕೆಯು ಆನ್ಲೈನ್ ಮೂಲಕ ಮನೆಯಲ್ಲೇ ನಡೆದಿದ್ದು, ಇದು ಮಕ್ಕಳಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಲವಾರು ಬದಲಾವಣೆಗಳು ಕಂಡು ಬರಲು ಕಾರಣವಾಯಿತು. ಇದೀಗ ನವೆಂಬರ್ ತಿಂಗಳ ಬಳಿಕ ಮತ್ತೆ ಶಾಲಾರಂಭವಾಗಿ ಮಕ್ಕಳಲ್ಲಿ ಮತ್ತೆ ಶಾಲಾ ದಿನಗಳ ಉತ್ಸಾಹ ತುಂಬಿದೆ. ಇದನ್ನು ಇನ್ನಷ್ಟು ಊರ್ಜಿತಗೊಳಿಸಲು ನಮ್ಮ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 'ಮರಳಿ ಬದುಕಿಗೆ' (ATHIJEEVANAM) ಎಂಬ ವಿನೂತನ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮವನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಸತೀಶ್ ಎಲಿಯಾಣ ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಮಾತೃ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಪ್ರಫುಲ್ಲ ಪೊಯ್ಯೆಲ್, ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ, ಶಾಲಾ ಶಿಕ್ಷಕಿ ನಯನ ಎಂ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಸೌಮ್ಯ ಪಿ ಸ್ವಾಗತಿಸಿ, ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ವಂದಿಸಿದರು. ಬಳಿಕ ಮಕ್ಕಳಿಗೆ ಚಟುವಟಿಕೆಗಳನ್ನು ಸಂಪನ್ಮೂಲ ವ್ಯಕ್ತಿ, ಶಾಲಾ ಶಿಕ್ಷಕಿ ನಯನ ಎಂ ನಡೆಸಿಕೊಟ್ಟರು. ಶಾಲಾ ಶಿಕ್ಷಕ ವೃಂದ ಸಹಕರಿಸಿದರು. ಇದೇ ವೇಳೆ ಶಾಲಾ ಮಕ್ಕಳ ಚಟುವಟಿಕೆಗಳ ಉತ್ಪನ್ನಗಳನ್ನು ಪುಸ್ತಕ ರೂಪದಲ್ಲಿ ಮಾಡಲಾಯಿತು. ಇದನ್ನು ಶಾಲಾ ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಪ್ರಫುಲ್ಲ ಪೊಯ್ಯೆಲ್ ರವರು ಬಿಡುಗಡೆಗೊಳಿಸಿದರು. ಬಳಿಕ ಪಾಯಸದೂಟ ಮಾಡಲಾಯಿತು.
No comments:
Post a Comment