FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Monday, 14 February 2022

ಪ್ರೀ ಪ್ರೈಮರಿ ವಿಭಾಗದ ತರಗತಿಗಳಿಗೆ ಚಾಲನೆ

      ಕಳೆದ 2 ವರ್ಷಗಳಿಂದ ಸ್ಥಗಿತವಾಗಿದ್ದ ಪ್ರೀ ಪ್ರೈಮರಿ ವಿಭಾಗದ ತರಗತಿಗಳು ಇದೀಗ ಸರಕಾರದ ಆದೇಶದ ಮೇರೆಗೆ ಆರಂಭಿಸಲು ಅನುಮತಿ ದೊರೆತಿದ್ದು, ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರೀ ಪ್ರೈಮರಿ ವಿಭಾಗದ ತರಗತಿಗೆ ಇಂದು ಚಾಲನೆ ನೀಡಲಾಯಿತು.

       ಶಾಲೆಯ ಪ್ರೀ ಪ್ರೈಮರಿ ವಿಭಾಗದ ನೇತೃತ್ವ ವಹಿಸುತ್ತಿರುವ ಶಾಲಾ ಹಳೆ ವಿದ್ಯಾರ್ಥಿ ಸಂಘ ಹಾಗೂ ಸಹಕರಿಸುತ್ತಿರುವ ರಕ್ಷಕ ಶಿಕ್ಷಕ ಸಂಘದ ಸಹಯೋಗದಲ್ಲಿ ಇಂದು ಆಫ್ಲೈನ್ ತರಗತಿಗಳಿಗೆ ಚಾಲನೆ ನೀಡಲಾಯಿತು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಹಾಜಿ ಕಂಚಿಲ ಪ್ರೀ ಪ್ರೈಮರಿ ವಿಭಾಗದ ಪುಟಾಣಿ ಮಕ್ಕಳಿಗೆ ಬಲೂನ್ ಹಾಗೂ ಮಾಸ್ಕ್ ಗಳನ್ನು ನೀಡಿ ಸ್ವಾಗತಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಸತೀಶ್ ಎಲಿಯಾನ, ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ, ರಕ್ಷಕ ಸಂಘದ ಉಪಾಧ್ಯಕ್ಷೆ ರಾಜಲಕ್ಷ್ಮಿ ದೇರಂಬಳ ಗುತ್ತು, ಮಾತೃ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಪ್ರೇಮ ಜಿ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶಶಿ ಕುಮಾರ್ ಕುಳೂರು ಉಪಸ್ಥಿತರಿದ್ದು ಶುಭ ಹಾರೈಸಿದರು.

      ಶಾಲಾ ಶಿಕ್ಷಕಿ ಸೌಮ್ಯ ಪಿ ಸ್ವಾಗತಿಸಿ, ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ವಂದಿಸಿದರು.















No comments:

Post a Comment