ಬೆಳಕಿನ ಹಬ್ಬ ದೀಪಾವಳಿಯನ್ನು ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಳವಾಗಿ ಆಚರಿಸಲಾಯಿತು.
ಆ ಪ್ರಯುಕ್ತ ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪಿ ರವರು ದೀಪಾವಳಿ ಹಬ್ಬದ ಹಿನ್ನೆಲೆಯನ್ನು ಮಕ್ಕಳಿಗೆ ತಿಳಿಸಿದರು.
ಬಳಿಕ ಸಾಲು ಹಣತೆಗಳನ್ನು ಬೆಳಗಿಸುವ ಮೂಲಕ ಕತ್ತಲೆಯಿಂದ ಬೆಳಕಿನೆಡೆಗೆ ಎಂಬ ಸಂದೇಶದೊಂದಿಗೆ ಮಕ್ಕಳಿಗೆ ಶುಭ ಹಾರೈಸಲಾಯಿತು. ಜೊತೆಗೆ ಪಟಾಕಿಗಳನ್ನು ಹಚ್ಚುವ ಮೂಲಕ ಮಕ್ಕಳ ಸಂಭ್ರಮಕ್ಕೆ ಇನ್ನಷ್ಟು ಪುಷ್ಟಿ ನೀಡಲಾಯಿತು. ಬಳಿಕ ಮಕ್ಕಳಿಗೆ ಸಿಹಿತಿಂಡಿ ವಿತರಿಸಲಾಯಿತು.
ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು
ReplyDeleteನಮ್ಮೂರಿನ ಕಿರಿಯ ಮಕ್ಕಳಿಗೆ ದೀಪಾವಳಿ ಆಚರಣೆ ಎಲ್ಲಾ ಮಕ್ಕಳೊಂದಿಗೆ ಸಂಭ್ರಮಿಸಲು ಪ್ರೋತ್ಸಾಹ ನೀಡುವ ಅಧ್ಯಾಪಕವೃಂದಕ್ಕೆ ಕೋಟಿ ಕೋಟಿ ನಮನಗಳು