ಶಾಲಾ ಗ್ರಂಥಾಲಯಕ್ಕೆ ಸುಮಾರು 50 ರಷ್ಟು ಮಕ್ಕಳ ಪುಸ್ತಕಗಳನ್ನು ನೀಡಿ ಹುಟ್ಟು ಹಬ್ಬವನ್ನು ಆಚರಿಸುವ ಮೂಲಕ ಶಾಲಾ ವಿದ್ಯಾರ್ಥಿ ಎಲ್ಲರ ಗಮನ ಸೆಳೆದಿರುವನು.
ನಮ್ಮ ಶಾಲೆಯ ಎರಡನೇ ತರಗತಿಯ ವಿದ್ಯಾರ್ಥಿ ಪ್ರಥಮ್ ಭಾರದ್ವಾಜ್ ತನ್ನ ಹುಟ್ಟಿದ ದಿನವನ್ನು ಸ್ಮರಣೀಯವಾಗಿಸುವುದರೊಂದಿಗೆ ಎಲ್ಲರಿಗೂ ಮಾದರಿಯಾಗಿರುವನು. ಮಕ್ಕಳ ಮಟ್ಟಕ್ಕೆ ಹೊಂದುವ, ಅತ್ಯುತ್ತಮವಾದ ಸುಮಾರು 50 ರಷ್ಟು ಪುಸ್ತಕಗಳನ್ನು ಶಾಲಾ ಗ್ರಂಥಾಲಯಕ್ಕೆ ನೀಡಿರುವನು. ಈತ ಮೀಯಪದವು ಉನ್ನತ ಪ್ರೌಢ ಶಾಲೆಯ ಅಧ್ಯಾಪಕರಾದ ಶ್ರೀಯುತ ಹರೀಶ್ ಜಿ ಹಾಗೂ ಪ್ರತಿಭಾ ದಂಪತಿಗಳ ಪುತ್ರನಾಗಿರುವನು. ಹುಟ್ಟು ಹಬ್ಬವನ್ನು ಆಚರಿಸುವ ಪ್ರಥಮ್ ಭಾರದ್ವಾಜ್ ಗೆ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ ಶುಭಾಶಯಗಳನ್ನು ತಿಳಿಸುವುದರೊಂದಿಗೆ, ಅಭಿನಂದನೆಯನ್ನು ಸಲ್ಲಿಸಿರುವರು.
No comments:
Post a Comment