ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2023-24 ನೇ ಸಾಲಿನ ಶಾಲಾ ವ್ಯವಸ್ಥಾಪಕ ಸಮಿತಿ ರೂಪೀಕರಣ ಮಹಾಸಭೆ ನಡೆಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷರಾದ ಶ್ರೀ ಸತೀಶ್ ಎಲಿಯಾಣ ವಹಿಸಿದ್ದರು. ಸಭೆಯಲ್ಲಿ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಯೋಗೀಶ್ ಶೆಟ್ಟಿ ಪೊಯ್ಯೇಲ್, ಮಾತೆಯರ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸುನೀತ ಕುಳೂರು, ಉಪಾಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಬೊಡ್ಡೋಡಿ, ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸುಹಾಸಿನಿ ಕುಳೂರು ಉಪಸ್ಥಿತರಿದ್ದರು.ಕಳೆದ ಶೈಕ್ಷಣಿಕ ವರ್ಷದ ವಾರ್ಷಿಕ ವರದಿಯನ್ನು ಶಿಕ್ಷಕಿ ಶ್ರೀಮತಿ ಅಶ್ವಿನಿ ಎಂ ವಾಚಿಸಿದರು. ಲೆಕ್ಕ ಪತ್ರ ಮಂಡನೆಯನ್ನು ಶಿಕ್ಷಕ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ಮಂಡಿಸಿದರು.
ಶಾಲಾ ಚಟುವಟಿಕೆಗಳ ಬಗ್ಗೆ ಅವಲೋಕನ ನಡೆಸಲಾಯಿತು. ಶತಮಾನೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು.
ಬಳಿಕ 2023-24 ನೇ ಸಾಲಿನ ನೂತನ ಶಾಲಾ ವ್ಯವಸ್ಥಾಪಕ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಶ್ರೀ ಸತೀಶ್ ಎಲಿಯಾಣ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಶ್ರೀ ಸುಧಾಕರ್ ಶೆಟ್ಟಿ ಎಲಿಯಾಣ ಅವಿರೋಧವಾಗಿ ಆಯ್ಕೆಯಾದರು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಜಯರಾಜ್ ಶೆಟ್ಟಿ ಚಾರ್ಲ, ಯೋಗೀಶ್ ಶೆಟ್ಟಿ ಪೊಯ್ಯೇಲ್, ವಿಶ್ವನಾಥ ಸುಣ್ಣಾರ, ಭುಜಂಗ ಮೂಲ್ಯ ಎಲಿಯಾಣ, ಪ್ರತಿಭಾ ನಾಯಕ್ ಕುಳಬೈಲು, ಸುಹಾಸಿನಿ ಕುಳೂರು, ಉಷ ಆದರ್ಶ ನಗರ, ದಿವ್ಯ ಶಾಲೆದಪಡ್ಪು, ರೇಷ್ಮ ಕುಳೂರು, ಮೋಹಿನಿ ಕರಿಪ್ಪಾರ್, ಶಿಕ್ಷಣ ತಜ್ಞರಾಗಿ ಶ್ರೀಮತಿ ಮೀನಾಕ್ಷಿ ಬೊಡ್ಡೋಡಿ ಆಯ್ಕೆಯಾದರು.
ಮಾತೆಯರ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆಯಾಗಿ ಶ್ರೀಮತಿ ಸುಚರಿತ ಚಿನಾಲ, ಉಪಾಧ್ಯಕ್ಷೆಯಾಗಿ ಶ್ರೀಮತಿ ಸುನಿತಾ ಕುಳೂರು ಅವಿರೋಧವಾಗಿ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ವೇದಾವತಿ ಸಂತಡ್ಕ, ಭಾರತಿ, ಶಾರದ ಕುಳೂರು, ಪ್ರಮೀಳ, ಸುಶೀಲ, ವಿನೋದ, ಸಂಧ್ಯ, ಪುಷ್ಪ, ನೆಫೀಸ ಕೊಜಮುಕು, ಆಯ್ಕೆಯಾದರು. ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆರಾಗಿ ಶ್ರೀಮತಿ ಚೈತ್ರ ಕಲ್ಕಾರ್ ಆಯ್ಕೆಯಾದರು. ನೂತನ ಸಮಿತಿಯ ಪದಗ್ರಹಣ ನಡೆಯಿತು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಸೌಮ್ಯ ಪಿ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಶ್ವೇತ ಕುಳೂರು ವಂದಿಸಿದರು. ಶಿಕ್ಷಕ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು.
No comments:
Post a Comment