ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಿತಿ ಮತ್ತು ಯೆನಪೋಯ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ದೇರಳಕಟ್ಟೆ ಮಂಗಳೂರು ಇದರ ಸಹಯೋಗದಲ್ಲಿ ಶ್ರೀ ಕುಳೂರು ಕನ್ಯಾನ ಸದಾಶಿವ ಕೆ ಶೆಟ್ಟಿ ಅಭಿಮಾನಿ ಬಳಗದ ವತಿಯಿಂದ ಉಚಿತ ವೈದ್ಯಕೀಯ ಶಿಬಿರ ಹಾಗೂ ರಕ್ತದಾನ ಶಿಬಿರವು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಳೂರಿನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕೊಡುಗೈದಾನಿ, ಹೇರಂಭ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಮುಂಬೈ ಇದರ ಸ್ಥಾಪಕಾಧ್ಯಕ್ಷರು, ಕುಳೂರು ಶಾಲಾ ಶತಮಾನೋತ್ಸವ ಸಮಿತಿ ಸದಸ್ಯರೂ ಆಗಿರುವ ಶ್ರೀ ಸದಾಶಿವ ಕೆ ಶೆಟ್ಟಿ ಕುಳೂರು ಕನ್ಯಾನರವರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಅಭಿಮಾನಿ ಬಳಗದ ಉದ್ಘಾಟನೆಯೂ ನಡೆಯಿತು. ಜೊತೆಗೆ ರಕ್ತದಾನಿಗಳಿಗೆ ಮೋಹನ್ ಶೆಟ್ಟಿ ಮಜ್ಜಾರ್ ಕೊಡುಗೆಯಾಗಿ ನೀಡಿದ ಟೀ-ಶರ್ಟ್ ಅನಾವರಣ ಹಾಗೂ ವಿತರಣೆ ನಡೆಯಿತು.ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಹಾಜಿ ಕಂಚಿಲ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಾರ್ಡ್ ಸದಸ್ಯರಾದ ಶ್ರೀ ಜನಾರ್ಧನ ಪೂಜಾರಿ ಕುಳೂರು, ಯೇನೆಪೋಯ ಮೆಡಿಕಲ್ ಆಸ್ಪತ್ರೆಯ ಡಾ. ಆನಂದ್, ಯೇನೆಪೋಯ ಮೆಡಿಕಲ್ ಕಾಲೇಜಿನ ಕ್ಯಾಂಪ್ ಕೋರ್ಡಿನೇಟರ್ ಶ್ರೀ ಅಬ್ದುಲ್ ರಝಾಕ್, ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ಸತ್ಯನಾರಾಯಣ ಶರ್ಮ ಪಿ, ಯುವ ಉದ್ಯಮಿ ಶ್ರೀ ಮೋಹನ್ ಶೆಟ್ಟಿ ಮಜ್ಜಾರ್ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ, ಶತಮಾನೋತ್ಸವ ಸಮಿತಿಯ ಹಣಕಾಸು ಸಮಿತಿ ಅಧ್ಯಕ್ಷರಾದ ಶ್ರೀ ಪಿ.ಆರ್.ಶೆಟ್ಟಿ ಪೊಯ್ಯೇಲ್, ಅತಿಥಿ ಸತ್ಕಾರ ಸಮಿತಿಯ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಶೆಟ್ಟಿ ಪೊಯ್ಯೇಲ್, ಶಿಸ್ತು ಸಮಿತಿಯ ಅಧ್ಯಕ್ಷರಾದ ಶ್ರೀ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ, ಸನ್ಮಾನ ಸಮಿತಿಯ ಅಧ್ಯಕ್ಷರಾದ ಶ್ರೀ ನಾರಾಯಣ ನೈಕ್ ನಡುಹಿತ್ಲು, ಕೋಶಾಧಿಕಾರಿ ಶ್ರೀ ಚಿಕ್ಕಪ್ಪ ಶೆಟ್ಟಿ ಎಲಿಯಾಣ, ಸ್ಮರಣ ಸಂಚಿಕೆ ಸಮಿತಿಯ ಅಧ್ಯಕ್ಷರಾದ ಶ್ರೀ ಜಗದೀಶ್ ಶೆಟ್ಟಿ ಎಲಿಯಾಣ, ಶಾಲಾ ವ್ಯವಸ್ಥಾಪನಾ ಸಮಿತಿ ಹಾಗೂ ಕಟ್ಟಡ ಸಮಿತಿಯ ಅಧ್ಯಕ್ಷರಾದ ಶ್ರೀ ಸತೀಶ್ ಎಲಿಯಾಣ, ಪ್ರಚಾರ ಸಮಿತಿಯ ಅಧ್ಯಕ್ಷರಾದ ಶ್ರೀ ವಸಂತ ಪೂಜಾರಿ ಕುಳೂರು, ಕಾರ್ಯಕ್ರಮ ಸಮಿತಿಯ ಅಧ್ಯಕ್ಷರಾದ ಶ್ರೀ ಹರಿರಾಮ ಕುಳೂರು, ಮಹಿಳಾ ಸಮಿತಿಯ ಅಧ್ಯಕ್ಷೆಯಾದ ಶ್ರೀಮತಿ ಚಂದ್ರಾವತಿ ವಿ.ಪಿ, ಆರೋಗ್ಯಸಮಿತಿಯ ಅಧ್ಯಕ್ಷರಾದ ಶ್ರೀಮತಿ ಕೃಷ್ಣವೇಣಿ ಕುಳೂರು ಪಾದೆ, ಆಹಾರ ಸಮಿತಿಯ ಅಧ್ಯಕ್ಷರಾದ ಶ್ರೀ ರಘುರಾಮ ಶೆಟ್ಟಿ ಎಲಿಯಾಣ, ಶ್ರೀ ಖಾದರ್ ಮುಸ್ಲಿಯಾರ್ ಚಿನಾಲ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಜಯರಾಜ್ ಶೆಟ್ಟಿ ಚಾರ್ಲ ಸ್ವಾಗತಿಸಿ, ಕಾರ್ಯದರ್ಶಿ ಶ್ರೀ ಅಬ್ದುಲ್ ಮಜೀದ್ ಸಾಹೇಬ್ ಚಾರ್ಲ ವಂದಿಸಿದರು. ಶಾಲಾ ಶಿಕ್ಷಕ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ನಡೆದ ಶಿಬಿರದಲ್ಲಿ ಸಾರ್ವಜನಿಕರು ಎಲುಬು ಮತ್ತು ಕೀಲು ಚಿಕಿತ್ಸೆ , ಕಣ್ಣಿನ ಚಿಕಿತ್ಸೆ , ಚರ್ಮರೋಗ ಚಿಕಿತ್ಸೆ ,ಮಕ್ಕಳ ಚಿಕಿತ್ಸೆ , ಇ.ಎನ್.ಟಿ, ಇ.ಸಿ.ಜಿ, ಜನರಲ್ ಮೆಡಿಸಿನ್ ಎಂಬೀ ವಿಭಾಗಗಳಲ್ಲಿ ನುರಿತ ತಜ್ಞರಿಂದ ತಪಾಸಣೆಯ ಜೊತೆಗೆ ಸೂಕ್ತ ಔಷಧಿ ವಿತರಣೆ ಮಾಡಲಾಯಿತು. ಕುಳೂರು ಹಾಗೂ ವಿವಿಧ ಊರುಗಳಿಂದ, ಸಂಘ ಸಂಸ್ಥೆಗಳಿಂದ ಆಗಮಿಸಿದ ಕುಳೂರು ಕನ್ಯಾನ ಶ್ರೀ ಸದಾಶಿವ ಶೆಟ್ಟಿಯವರ ಅಭಿಮಾನಿಗಳು ರಕ್ತದಾನ ಮಾಡಿ ಅಭಿಮಾನವನ್ನು ತೋರಿದರು.
ರಕ್ತದಾನಿಗಳ ಅಭಿಮಾನವನ್ನು ಕಣ್ತುಂಬಿಕೊಂಡು ಸಂತೋಷವನ್ನು ವ್ಯಕ್ತಪಡಿಸಿದ ಶ್ರೀಯುತ ಸದಾಶಿವ ಶೆಟ್ಟಿ ಕುಳೂರು ಕನ್ಯಾನರವರು ಬಿಡುವಿಲ್ಲದ ಸಮಯದ ನಡುವೆಯೂ ಎಲ್ಲರೊಂದಿಗೆ ಸಮಯವನ್ನು ಕಳೆದು ಅಭಿನಂದಿಸಿದರು.
ರಕ್ತದಾನಿಗಳಿಗೆ ಟೀ ಶರ್ಟ್ ಕೊಡುಗೆಯನ್ನು ಯುವ ಉದ್ಯಮಿ ಶ್ರೀ ಮೋಹನ್ ಶೆಟ್ಟಿ ಮಜ್ಜಾರ್, ಯೇನೆಪೋಯ ಮೆಡಿಕಲ್ ಕಾಲೇಜಿನ ಸಿಬ್ಬಂದಿಗಳಿಗೆ ಊಟೋಪಚಾರದ ವ್ಯವಸ್ಥೆಯನ್ನು ಸನ್ಮಾನ ಸಮಿತಿಯ ಅಧ್ಯಕ್ಷರಾದ ಶ್ರೀ ನಾರಾಯಣ ನೈಕ್, ಚಾ-ತಿಂಡಿಯ ವ್ಯವಸ್ಥೆಯನ್ನು ಶಾಲಾ ಮುಖ್ಯ ಶಿಕ್ಷಕಿ ಹಾಗೂ ಶಿಕ್ಷಕ ವೃಂದ ನೀಡಿ ಸಹಕರಿಸಿದ್ದು ಎಲ್ಲರಿಗೂ ಶಾಲಾ ಶತಮಾನೋತ್ಸವ ಸಮಿತಿಯ ವತಿಯಿಂದ ಧನ್ಯವಾದವನ್ನು ಅರ್ಪಿಸಲಾಯಿತು.
ವೈದ್ಯಕೀಯ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಯೇನೆಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಿಬ್ಬಂದಿಗಳಿಗೆ ಶತಮಾನೋತ್ಸವ ಸಮಿತಿಯ ಪರವಾಗಿ ಧನ್ಯವಾದಗಳನ್ನು ಅರ್ಪಿಸಿ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಶಾಲಾ ಶತಮಾನೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದು ಸಹಕರಿಸಿದರು.
No comments:
Post a Comment