ನಮ್ಮ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಳೂರಿನ ಶತಮಾನೋತ್ಸವದ ಅಂಗವಾಗಿ ಶಾಲಾ ಮಕ್ಕಳ ಕ್ರೀಡಾಕೂಟವು ಇಂದು ನಡೆಯಿತು.
ಮಕ್ಕಳ ಕ್ರೀಡಾಕೂಟಕ್ಕೆ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ರವರು ಚಾಲನೆ ನೀಡಿದರು. ಪ್ರೀ ಪ್ರೈಮರಿ ಹಾಗೂ ಒಂದರಿಂದ ನಾಲ್ಕನೇ ತರಗತಿಯ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಎಲ್ಲಾ ಮಕ್ಕಳು ಕ್ರೀಡಾಕೂತದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಯಶಸ್ವಿಗೊಳಿಸಿದರು. ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದು ಕ್ರೀಡಾಕೂಟವನ್ನು ಮುನ್ನಡೆಸಿದರು.
No comments:
Post a Comment