FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Tuesday 25 June 2024

ಪ್ರಜಾಪ್ರಭುತ್ವ ಮಾದರಿಯಲ್ಲಿ ಶಾಲಾ ನಾಯಕನ ಆಯ್ಕೆ :

       ವಿಶ್ವದಲ್ಲೇ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಚುನಾವಣಾ ವ್ಯವಸ್ಥೆಯ ಕುರಿತು ಶಾಲಾ ಮಕ್ಕಳಿಗೆ ಅರಿವು ಮೂಡಿಸಲು ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ‌ ನಾಯಕನ ಆಯ್ಕೆಗೆ ಚುನಾವಣೆ ನಡೆಸಲಾಯಿತು. 

      ಆ ಪ್ರಯುಕ್ತ ಎರಡು ದಿನಗಳ ಹಿಂದೆ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ರವರಿಗೆ ಸಲ್ಲಿಸಿದರು.

        ಇಂದು ನಡೆದ ಶಾಲಾ ಚುನಾವಣೆಯಲ್ಲಿ ತಮ್ಮ ನೆಚ್ವಿನ ವಿದ್ಯಾರ್ಥಿ ಅಭ್ಯರ್ಥಿಗೆ ಮತಹಾಕಲು  ಮಕ್ಕಳು ಸರದಿ ಸಾಲಿನಲ್ಲಿ ನಿಂತು ತಮ್ಮ ಕೈ ಬೆರಳಿಗೆ ಮತದಾನದ ಗುರುತನ್ನು ಹಾಕಿಸಿ ಗೌಪ್ಯ ಮತದಾನದ ಮೂಲಕ ಮತವನ್ನು ಹಾಕಿದರು.

      ಮತದಾನದ ಪ್ರಕ್ರಿಯೆಯನ್ನು ಶಾಲಾ ಮಕ್ಕಳೇ ನಿರ್ವಹಿಸಿದ್ದು ವಿಶೇಷವಾಗಿತ್ತು. ಈ ಕಾರ್ಯದಲ್ಲಿ ವಿದ್ಯಾರ್ಥಿಗಳಾದ ಮೋಕ್ಷಿತ್, ಚೇತನಾ ಬಿ, ಮೈತ್ರಿ, ಪ್ರಶಸ್ತ್ ಪಿ.ವೈ. ಶೆಟ್ಟಿ, ಅಂಕಿತ್ ರಾಜ್, ಗಾಯತ್ರಿ, ಶ್ರೀಜಿತ್ ಹಾಗೂ ಯಶ್ವಿತ ಸಹಕರಿಸಿದರು.

       ಅಂತಿಮವಾಗಿ ಚುನಾವಣಾ ಫಲಿತಾಂಶವನ್ನು ಶಾಲಾ ಮುಖ್ಯ ಶಿಕ್ಷಕಿ ಘೋಷಿಸಿದಾಗ ಮಕ್ಕಳ ಸಂಭ್ರಮ ಮುಗಿಲು ಮುಟ್ಟಿತ್ತು.

     ಶಾಲಾ ನಾಯಕನಾಗಿ ಪ್ರಥಮ್ ಭಾರದ್ವಾಜ್ ಪಿ.ಎಚ್, ಉಪನಾಯಕನಾಗಿ ವಂಶಿಕ್ ಆಯ್ಕೆಯಾದರು. ಕ್ರೀಡಾ ಮಂತ್ರಿಯಾಗಿ ನಿಶ್ವಿತ್, ಆರೋಗ್ಯ ಮಂತ್ರಿಯಾಗಿ ಹನ್ವಿಕ ಹಾಗೂ ಸಾಂಸ್ಕೃತಿಕ ಮಂತ್ರಿಯಾಗಿ ಯಶ್ವಿಕ್ ಜೆ ಕುಮಾರ್ ರವರು ಆಯ್ಕೆಯಾದರು.

     ನೂತನವಾಗಿ ಆಯ್ಕೆಯಾದ ಶಾಲಾ ನಾಯಕರನ್ನು ಮೆರವಣಿಗೆ ಮಾಡುವ ಮೂಲಕ ಶಾಲಾ ಮಕ್ಕಳು ಅಭಿನಂದಿಸಿ ಸಂಭ್ರಮಿಸಿದರು.

    ‌  ಬಳಿಕ ನೂತನ ಬಾಲ ಮಂತ್ರಿಮಂಡಲದ ಪ್ರತಿಜ್ಞಾ ಬೋಧನೆ ನಡೆಯಿತು.

      ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದು ಚುನಾವಣಾ ಪ್ರಕ್ರಿಯೆಯಲ್ಲಿ ಸಹಕರಿಸಿದರು‌.




















No comments:

Post a Comment