ಮೀಂಜ ಗ್ರಾಮ ಪಂಚಾಯತ್ ವತಿಯಿಂದ ನಮ್ಮ ಶಾಲೆಗೆ 4 ಬೆಂಚು ಮತ್ತು 4 ಡೆಸ್ಕ್ ವಿತರಣೆ ಇಂದು ನಡೆಯಿತು. ಇವುಗಳನ್ನು ವಾರ್ಡ್ ಸದಸ್ಯರಾದ ಶ್ರೀ ಜನಾರ್ಧನ ಪೂಜಾರಿ ಕುಳೂರು ಹಾಗೂ ಮೀಂಜ ಪಿ.ಇ.ಸಿ. ಯ ಸೆಕ್ರೆಟರಿಯೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಜಿಬೈಲಿನ ಮುಖ್ಯ ಶಿಕ್ಷಕರೂ ಆಗಿರುವ ಶ್ರೀ ಸುರೇಶ್ ಬಂಗೇರರವರು ಶಾಲೆಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ಹಾಗೂ ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು.
ಶಾಲೆಗೆ ಬೆಂಚು ಡೆಸ್ಕುಗಳನ್ನು ಒದಗಿದಲು ಸಹಕರಿಸಿದ ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಂದರಿ ಆರ್ ಶೆಟ್ಟಿ ಮತ್ತು ಸರ್ವ ಸದಸ್ಯರು ಹಾಗೂ ಸಿಬ್ಬಂದಿವರ್ಗದವರಿಗೆ ಶಾಲಾ ಪರವಾಗಿ ಅನಂತಾನಂತ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ.
No comments:
Post a Comment