ಕಳೆದ ಫೆಬ್ರವರಿ 16 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕುಳೂರು ಪಾದೆ ಶ್ರೀ ದಿನಕರ್ ಶೆಟ್ಟಿ ಹಾಗೂ ಶ್ರೀಮತಿ ಕೃಷ್ಣವೇಣಿ ಯವರ ಸುಪುತ್ರಿ ಚಿ|ಸೌ| ಸಹನ ಹಾಗೂ ಚಿ| ಸುಶಾಂತ್ ರವರಿಗೆ ನಮ್ಮ ಶಾಲಾ ಪರವಾಗಿ ಹಾರ್ದಿಕ ಶುಭಾಶಯಗಳನ್ನು ಅರ್ಪಿಸುತ್ತೇವೆ.
ಮದುವೆಯ ಈ ಶುಭ ಸಂದರ್ಭದಲ್ಲಿ ಇಂದು ನಮ್ಮ ಶಾಲೆಯ ಮಕ್ಕಳಿಗೆ ವಿಶೇಷ ಭೋಜನದ ವ್ಯವಸ್ಥೆಯನ್ನು ಕುಳೂರು ಪಾದೆ ಶ್ರೀ ದಿನಕರ್ ಶೆಟ್ಟಿ ಹಾಗೂ ಶ್ರೀಮತಿ ಕೃಷ್ಣವೇಣಿ ಮತ್ತು ಮಕ್ಕಳು ಮಾಡಿರುತ್ತಾರೆ. ಇಂದು ತಮ್ಮ ಮಕ್ಕಳಾದ ಕುಮಾರಿ ಪ್ರೀತಿ ಹಾಗೂ ಸಂಪ್ರೀತ್ ಶೆಟ್ಟಿ ಯವರೊಂದಿಗೆ ಶಾಲೆಗೆ ಬಂದು ಶಾಲಾ ಮಕ್ಕಳಿಗೆ ವಿಶೇಷ ಪಾಯಸದೂಟವನ್ನು ಬಡಿಸಿ ತಾವೂ ಮಕ್ಕಳೊಂದಿಗೆ ಊಟ ಮಾಡಿ ತಮ್ಮ ಖುಷಿಯನ್ನು ನಮ್ಮ ಜೊತೆ ಹಂಚಿಕೊಂಡಿದ್ದಾರೆ. ಅವರಿಗೆ ಶಾಲಾ ಪರವಾಗಿ ಅನಂತಾನಂತ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ.
No comments:
Post a Comment