ನಮ್ಮ ಶಾಲೆಯಲ್ಲಿ 2017-18 ನೇ ಸಾಲಿನ ಮೀಂಜ ಪಂಚಾಯತ್ ಮಟ್ಟದ ಶಾಲಾ ಪ್ರವೇಶೋತ್ಸವವು ನಡೆಯಲಿದ್ದು ಅದರ ಪೂರ್ವಭಾವಿಯಾಗಿ ತಾ. 25-05-2017 ರಂದು ಪಿ.ಟಿ.ಎ ಹಾಗೂ ಹಳೆ ವಿದ್ಯಾರ್ಥಿಗಳ ಸಭೆಯನ್ನು ಕರೆಯಲಾಯಿತು. ಸಭೆಯಲ್ಲಿ ಬಿ.ಆರ್.ಸಿ ತರಬೇತುದಾರರಾದ ಶ್ರೀ ಇಸ್ಮಾಯಿಲ್ ರಫೀಕ್ ರವರು ಪ್ರವೇಶೋತ್ಸವದ ರೂಪುರೇಷೆಯನ್ನು ಹೇಳಿದರು. ಸಭೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ವಿನೋದ್ ಕುಮಾರ್ ಬಿ,.ವಾರ್ಡ್ ಸದಸ್ಯೆ ಶ್ರೀಮತಿ ಚಂದ್ರಾವತಿ ವಿ.ಪಿ, ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಸೌಮ್ಯಲತಾ ಕುಳಿಂಜ, ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಮತಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ಮೊಹಮ್ಮದ್ ಕಂಚಿಲ ಉಪಸ್ಥಿತರಿದ್ದರು. ಪ್ರವೇಶೋತ್ಸವದ ಉಸ್ತುವಾರಿಯನ್ನು ಶಾಲಾ ಹಳೆ ವಿದ್ಯಾರ್ಥಿ ಸಂಘವು ವಹಿಸಿದ್ದು ಅವರಿಗೆ ಎಲ್ಲರ ಪರವಾಗಿ ಧನ್ಯವಾದಗಳನ್ನು ಅರ್ಪಿಸಲಾಯಿತು.
No comments:
Post a Comment