ಸಾರ್ವಜನಿಕ ಶಿಕ್ಷಣ ರಂಗದಲ್ಲಿ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಕೇರಳ ಸರಕಾರವು ಹಲವಾರು ಯೋಜನೆಗಳನ್ನು ತರುತ್ತಿದೆ. ಇದರ ಮುಂದುವರಿದ ಭಾಗವೇ ಶಾಲಾಭಿವೃದ್ಧಿ ಸೆಮಿನಾರ್ ಮಂಡನೆ. ನಮ್ಮ ಶಾಲೆಯಲ್ಲಿ ಈ ಕಾರ್ಯಕ್ರಮವನ್ನು ತಾ. 31-03-2017 ನೇ ಶುಕ್ರವಾರದಂದು ನಡೆಸಲಾಯಿತು. ಕಾರ್ಯಕ್ರಮವನ್ನು ವಾರ್ಡ್ ಸದಸ್ಯೆ ಶ್ರೀಮತಿ ಚಂದ್ರಾವತಿ ವಿ.ಪಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಾಲಾ ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಸೌಮ್ಯಲತಾ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಮಾತೃ ಸಂಘದ ಅಧ್ಯಕ್ಷೆ ಮಮತಾ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಶ್ರೀ ಚಿಕ್ಕಪ್ಪ ಶೆಟ್ಟಿ ಎಲಿಯಾಣ, ಶ್ರೀ ಶುಭಾನಂದ ಶೆಟ್ಟಿ ಕುಳೂರು, ಶ್ರೀ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ ಹಾಗೂ ಪಿ.ಟಿ.ಎ, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಹಾಗೂ ಊರ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ವಿನೋದ್ ಕುಮಾರ್ ಬಿ ಸ್ವಾಗತಿಸಿ, ಶಿಕ್ಷಕ ಜಯಪ್ರಶಾಂತ್ ಪಿ ವಂದಿಸಿದರು. ಶಾಲಾ ಶಿಕ್ಷಕಿ ಶ್ರೀಮತಿ ಸೌಮ್ಯ ಪಿ ಶಾಲಾಭಿವೃದ್ಧಿ ಸೆಮಿನಾರ್ ಮಂಡಿಸಿದರು. ಬಳಿಕ ನೂತನ ಶಾಲಾಭಿವೃದ್ಧಿ ಸಮಿತಿಯನ್ನು ರೂಪೀಕರಿಸಲಾಯಿತು.
No comments:
Post a Comment