2016-17 ನೇ ಸಾಲಿನ ರಕ್ಷಕ-ಶಿಕ್ಷಕ ಸಮಿತಿಯ ಕೊನೆಯ ಸಭೆಯನ್ನು ತಾ. 16-06-2017 ರಂದು ನಡೆಸಲಾಯಿತು. ಕಳೆದ ಸಾಲಿನ ಚಟುವಟಿಕೆಗಳ ಅವಲೋಕನ,ಲೆಕ್ಕ ಪತ್ರ ಮಂಡನೆ, ಮುಂದಿನ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಸಲಾಯಿತು. ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಸೌಮ್ಯಲತಾ ಕುಳಿಂಜ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಶಿಕ್ಷಕಿ ಶ್ರೀಮತಿ ಸೌಮ್ಯ ಪಿ ಕಳೆದ ಶೈಕ್ಷಣಿಕ ವರ್ಷದ ವಾರ್ಷಿಕ ವರದಿ ಮಂಡಿಸಿದರು. ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಲಲಿತ ಉಪಸ್ಥಿತರಿದ್ದರು. ಸಭಿಕರಾದ ಶ್ರೀ ಪ್ರಮೋದ್ ಶೆಟ್ಟಿ ಶಾಲೆದಪಡ್ಪು ರವರು ಕಳೆದ ಶೈಕ್ಷಣಿಕ ವರ್ಷದ ಶಾಲೆಯ ಕಾರ್ಯಚಟುವಟಿಕೆಗಳ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿ ಅಭಿನಂದಿಸಿದರು.
No comments:
Post a Comment