ಶಾಲಾ ಪ್ರವೇಶೋತ್ಸವವ ಹಾಗೂ ಶಾಲೋದ್ಯಾನದ ಉದ್ಘಾಟನೆಯ ನೇತೃತ್ವ ವಹಿಸಿದ್ದ ಶಾಲಾ ಹಳೆ ವಿದ್ಯಾರ್ಥಿ ಸಂಘದ ಸಭೆಯು ತಾ. 11-06-2017 ರಂದು ನಡೆಯಿತು. ಪ್ರವೇಶೋತ್ಸವವ ಹಾಗೂ ಶಾಲೋದ್ಯಾನದ ಉದ್ಘಾಟನೆಯ ಕಾರ್ಯಕ್ರಮದ ಯಶಸ್ಸು, ಅವಲೋಕನ ಹಾಗೂ ಖರ್ಚು ವೆಚ್ಚದ ಕುರಿತು ಚರ್ಚೆ ನಡೆಸಲಾಯಿತು. ಸಂಘದ ಅಧ್ಯಕ್ಷ ಶ್ರೀ ಮೊಹಮ್ಮದ್ ಕಂಚಿಲರವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ವಾರ್ಡ್ ಸದಸ್ಯೆ ಶ್ರೀಮತಿ ಚಂದ್ರಾವತಿ ವಿ.ಪಿ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಶ್ರೀ ಚಿಕ್ಕಪ್ಪ ಶೆಟ್ಟಿ ಎಲಿಯಾಣ, ಪ್ರಧಾನ ಕಾರ್ಯದರ್ಶಿ ಶ್ರೀ ಹರಿರಾಮ ಕುಳೂರು, ಜತೆ ಕಾರ್ಯದರ್ಶಿ ಶ್ರೀ ವಸಂತ ಪೂಜಾರಿ ಕುಳೂರು, ಸದಸ್ಯರಾದ ಶ್ರೀ ಚಂದ್ರಹಾಸ ಪೂಜಾರಿ ಕುಳೂರು, ಅಬ್ದುಲ್ ಮಜೀದ್ ಸಾಹೇಬ್ ಚಾರ್ಲ, ಜಯರಾಜ್ ಶೆಟ್ಟಿ ಚಾರ್ಲ, ಸದಾಶಿವ ಸೇನವ ನಾರ್ಣಹಿತ್ಲು, ಶಶಿ ಕುಮಾರ್ ಕುಳೂರು, ರಘುನಾಥ ಮಾಸ್ಟರ್ ಕುಳೂರು ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
No comments:
Post a Comment