FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Friday, 15 July 2022

ಪ್ರಜಾಪ್ರಭುತ್ವ ಮಾದರಿಯಲ್ಲಿ ಶಾಲಾ ಚುನಾವಣೆ : ಶಾಲಾ ನಾಯಕನ ಆಯ್ಕೆ:

            ಭಾರತವು ವಿಶ್ವದಲ್ಲೇ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಗುರುತಿಸಿಕೊಂಡಿದ್ದು, ಈ ಪ್ರಜಾಪ್ರಭುತ್ವ ಪರಿಕಲ್ಪನೆಯನ್ನು ಶಾಲಾ ಮಕ್ಕಳಲ್ಲಿ ಮೂಡಿಸಲು ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ನಾಯಕನ ಆಯ್ಕೆಗೆ ಪ್ರಜಾಪ್ರಭುತ್ವ ಮಾದರಿಯಲ್ಲಿ ಶಾಲಾ ಚುನಾವಣೆ ನಡೆಯಿತು.

           ಹಿಂದಿನ ದಿನ ಈ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಶಾಲಾ ಮುಖ್ಯೋಪಾಧ್ಯಾಯರಿಗೆ ನೀಡುವ ಮೂಲಕ ಈ ಶಾಲಾ ಚುನಾವಣೆ ಪ್ರಕ್ರಿಯೆ ಆರಂಭವಾಯಿತು. ಇಂದು ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸಿದರು. ಬಳಿಕ ನಡೆದ ಶಾಲಾ ಚುನಾವಣೆಯು ಎಲ್ಲರ ಕುತೂಹಲಕ್ಕೆ ಕಾರಣವಾಯಿತು.

             ಮಕ್ಕಳು ಸರದಿ ಸಾಲಿನಲ್ಲಿ ಬಂದು ತಮ್ಮ ನೆಚ್ಚಿನ ಅಭ್ಯರ್ಥಿಗೆ ಮತ ಹಾಕಿದರು. ತಮ್ಮ ಬೆರಳಿಗೆ ಮತ ಹಾಕಿದ ಗುರುತನ್ನು ಹಾಕಿಸಿಕೊಂಡು ಗೌಪ್ಯ ಮತದಾನ ಮಾಡುವ ಮೂಲಕ ತಮ್ಮ ಮತವನ್ನು ಚಲಾಯಿಸಿದರು. ಚುನಾವಣಾ ಪ್ರಕ್ರಿಯೆಯನ್ನು ಶಾಲಾ ಮಕ್ಕಳೇ ನಿರ್ವಹಿಸಿದ್ದು ವಿಶೇಷವಾಗಿತ್ತು. ಈ ಕಾರ್ಯದಲ್ಲಿ ವಿದ್ಯಾರ್ಥಿಗಳಾದ ಪ್ರಜ್ವಲ್, ದೀಕ್ಷಿತ್, ಲಿಪಿಕ ಪಿ, ಡಿಯಶ್ರೀ ಜಿ. ಕೆ, ಕಿಶನ್ ಹಾಗೂ ಧನ್ವಿತ್ ಸಹಕರಿಸಿದರು.

            ಮುಖ್ಯ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಮತ ಎಣಿಕೆ ನಡೆಯಿತು. ಬಳಿಕ ವಿಜೇತ ಅಭ್ಯರ್ಥಿಗಳ ಘೋಷಣೆಯನ್ನು ಮಾಡಿದರು. ಶಾಲಾ ನಾಯಕನಾಗಿ ಹವ್ಯಾಸ್ ಕೆ, ಉಪ ನಾಯಕಿಯಾಗಿ ಜೀಯ ಜೆ ಶೆಟ್ಟಿ ಆಯ್ಕೆಯಾದರು. ವಿಜೇತ ಅಭ್ಯರ್ಥಿಗಳಿಗೆ ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ರವರು ಹೂಗುಚ್ಛ ನೀಡಿ ಅಭಿನಂದಿಸಿದರು. ಕಲೆ ಮತ್ತು ಕ್ರೀಡಾ ಮಂತ್ರಿಯಾಗಿ ಭವಿಷ್ ಕೆ.ಎಸ್, ಆರೋಗ್ಯ ಮಂತ್ರಿಯಾಗಿ ಸಾನ್ವಿಕ ಆಯ್ಕೆ ಮಾಡಲಾಯಿತು. ಬಳಿಕ ಪ್ರಮಾಣ ವಚನ ಸ್ವೀಕಾರ ನಡೆಯಿತು. ವಿಜೇತ ಅಭ್ಯರ್ಥಿಗಳ ವಿಜಯ ಘೋಷ ಯಾತ್ರೆ ಮಕ್ಕಳು ನಡೆಸಿದರು. ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದು ಸಹಕರಿಸಿದರು.






















No comments:

Post a Comment