23 ವರ್ಷಗಳ ಹಿಂದೆ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತವು ವಿಜಯ ಪತಾಕೆಯನ್ನು ಹಾರಿಸಿದ ದಿನವಿಂದು.
ಭಾರತದೊಂದಿಗೆ ನೆರೆಯ ಪಾಕಿಸ್ತಾನವು ತನ್ನ ಗಡಿಯನ್ನು ದಾಟಿ ಕಾರ್ಗಿಲ್ ನಲ್ಲಿ ಯುದ್ಧಕ್ಕೆ ಬಂದು ಕೊನೆಗೆ ಭಾರತದ ವೀರ ಸೇನಾನಿಗಳ ಕೆಚ್ಚೆದೆಯ ಹೋರಾಟದಿಂದ ಸೋಲೊಪ್ಪಿದ ದಿನವನ್ನು ಅವಿಸ್ಮರಣೀಯವಾಗಿಡಲು ಹಾಗೂ ಈ ಹೋರಾಟದಲ್ಲಿ ವೀರ ಮರಣವನ್ನಪ್ಪಿದ ವೀರ ಸೇನಾನಿಗಳ ಬಲಿದಾನವನ್ನು ಸ್ಮರಿಸಲು ಜುಲೈ 26 ಕಾರ್ಗಿಲ್ ವಿಜಯ ದಿವಸ ಎಂದು ಭಾರತದೆಲ್ಲೆಡೆ ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಕುಳೂರು ಶಾಲೆಯಲ್ಲೂ ಕಾರ್ಗಿಲ್ ವಿಜಯ ದಿವಸವನ್ನು ಸರಳವಾಗಿ ಆಚರಿಸಲಾಯಿತು. ಶಾಲಾ ಶಿಕ್ಷಕಿ ಸೌಮ್ಯ ಪಿ ದಿನ ವಿಶೇಷವನ್ನು ಶಾಲಾ ಮಕ್ಕಳಿಗೆ ತಿಳಿಸಿದರು. ಕಾರ್ಗಿಲ್ ಯುದ್ಧದ ಕುರಿತಾದ ವೀಡಿಯೋ ಪ್ರದರ್ಶನ ನಡೆಸಲಾಯಿತು. ಶಾಲಾ ಶಿಕ್ಷಕಿಯರು ಉಪಸ್ಥಿತರಿದ್ದು ಸಹಕರಿಸಿದರು.
No comments:
Post a Comment