ಬಾಹ್ಯಾಕಾಶ ಯಾತ್ರೆಯ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವ ಸಲುವಾಗಿ, ಮಾನವನು ಚಂದ್ರನ ಮೇಲೆ ಕಾಲಿಟ್ಟ ದಿನದ ಸವಿ ನೆನಪಿಗಾಗಿ ಇಂದು ಶಾಲೆಯಲ್ಲಿ ಚಾಂದ್ರ ದಿನವನ್ನು ಆಚರಿಸಲಾಯಿತು.
ಆ ಪ್ರಯುಕ್ತ ಮಾನವನು ಪ್ರಪ್ರಥಮವಾಗಿ ಚಂದ್ರನ ಮೇಲೆ ಕಾಲಿಟ್ಟ ಸಂದರ್ಭದ ವೀಡಿಯೋ ಪ್ರದರ್ಶನ ನಡೆಸಲಾಯಿತು. ಜೊತೆಗೆ ಚಾಂದ್ರ ದಿನದ ಆಚರಣೆಯ ಪ್ರಧಾನ ಉದ್ದೇಶ ಹಾಗೂ ಮಾಹಿತಿಯನ್ನು ಮಕ್ಕಳಿಗೆ ನೀಡಲಾಯಿತು.ಚಾಂದ್ರ ದಿನದ ಮಾಹಿತಿಯನ್ನು ತಿಳಿಯಲು ಚಿತ್ರ ಪ್ರದರ್ಶನ ನಡೆಸಲಾಯಿತು. ನಾಳೆ ಚಾಂದ್ರ ದಿನದ ವಿಶೇಷ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ. ಶಾಲಾ ಶಿಕ್ಷಕರು ಜೊತೆಗಿದ್ದು ಸಹಕರಿಸಿದರು.
No comments:
Post a Comment