FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Friday, 22 June 2018

ಚಿತ್ರ ಪ್ರದರ್ಶನ ಹಾಗೂ ಪುರಾತನ ವಸ್ತು ಸಂಗ್ರಹ ಪ್ರದರ್ಶನ

         ನವಯುವಕ ಕಲಾವೃಂದ ಗ್ರಂಥಾಲಯ ಚಿನಾಲ, ಕುಳೂರು ಇದರ ನೇತೃತ್ವದಲ್ಲಿ ಗ್ರಂಥಾಲಯ ವಾಚನ ಪಕ್ಷಾಚರಣೆಯ ಭಾಗವಾಗಿ ಚಿತ್ರ ಪ್ರದರ್ಶನ ಹಾಗೂ ಪುರಾತನ ವಸ್ತು ಸಂಗ್ರಹ ಪ್ರದರ್ಶನ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ವಾರ್ಡ್ ಸದಸ್ಯೆ ಶ್ರೀಮತಿ ಚಂದ್ರಾವತಿ ವಿ. ಪಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಪ್ರಮೋದ್ ಶೆಟ್ಟಿ ಸಾಲೆದಪಡ್ಪು, ಶಾಲಾ ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಆಶಾಲತ ಕುಳೂರು, ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪಿ, ಲೈಬ್ರರಿ ಕೌನ್ಸಿಲ್ ಸದಸ್ಯರಾದ ಶ್ರೀ ರಾಧಾಕೃಷ್ಣ ಮಾಸ್ಟರ್, ನವಯುವಕ ಕಲಾವೃಂದ ಗ್ರಂಥಾಲಯದ ಸದಸ್ಯರಾದ ಶ್ರೀ ಕಮಲಾಕ್ಷ ಚಿನಾಲ ಉಪಸ್ಥಿತರಿದ್ದರು. ನವಯುವಕ ಕಲಾವೃಂದ ಗ್ರಂಥಾಲಯದ ಸದಸ್ಯರಾದ ಶ್ರೀ ಉದಯ ಸಿ. ಎಚ್ ಸ್ವಾಗತಿಸಿ, ಶ್ರೀ ಕಮಲಾಕ್ಷ ಚಿನಾಲ ವಂದಿಸಿದರು. ಚಿತ್ರ ಕಲಾವಿದರಾದ ರಾಧಾಕೃಷ್ಣ ಮಾಸ್ಟರ್ ರವರ ಚಿತ್ರ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಪುರಾತನ ವಸ್ತು ಸಂಗ್ರಹದ ಪ್ರದರ್ಶನ ಎಲ್ಲರ ಮನಸೂರೆಗೊಳಿಸಿತು. ಹಿಂದಿನ ಕಾಲದಲ್ಲಿ ಉಪಯೋಗಿಸುತ್ತಿದ್ದ ಗದ್ದೆ ಕೃಷಿ ಉಪಕರಣಗಳು, ಗೃಹೋಪಕರಣಗಳು, ಹಿಂದಿನ ಕಾಲದಲ್ಲಿ ಬಳಕೆಯಲ್ಲಿದ್ದ ನಾಣ್ಯ, ನೋಟು, ಸ್ಟಾಂಪ್, ಭಿತ್ತಿ ಪತ್ರಿಕೆ ಎಲ್ಲರ ಗಮನ ಸೆಳೆಯಿತು.




















No comments:

Post a Comment