ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಗೂ ಭಾರತೀಯ ಯುವ ಮೋರ್ಚಾ ಕುಳೂರು ಘಟಕದ ವತಿಯಿಂದ ಕುಳೂರು ಶಾಲೆಯ ಪ್ರೀ ಪ್ರೈಮರಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಹಾಗೂ ಶಾಲಾ ಮಕ್ಕಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ವಾರ್ಡ್ ಸದಸ್ಯೆ ಶ್ರೀಮತಿ ಚಂದ್ರಾವತಿ ವಿ. ಪಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಪ್ರಮೋದ್ ಶೆಟ್ಟಿ ಸಾಲೆದಪಡ್ಪು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೊಹಮ್ಮದ್ ಕಂಚಿಲ, ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪಿ, ಭಾರತೀಯ ಜನತಾ ಪಾರ್ಟಿಯ ಮಂಜೇಶ್ವರ ಬ್ಲೋಕ್ ಉಪಾಧ್ಯಕ್ಷ ಹರಿಶ್ಚಂದ್ರ ಮಂಜೇಶ್ವರ, ಯುವ ಮೋರ್ಚಾ ಜಿಲ್ಲಾ ಮೀಡಿಯಾ ಕೌನ್ಸಿಲ್ ವಿಜಯ್ ಕುಮಾರ್ ರೈ, ಎ.ಬಿ.ವಿ.ಪಿ ಯ ಜಿಲ್ಲಾ ಕಾರ್ಯದರ್ಶಿ ಮೋಹನ ಬಂಬ್ರಾಣ, ಪತ್ರಕರ್ತ ಜಗದೀಶ್ ಪ್ರತಾಪ್ ನಗರ, ಶಾಲಾಭಿವೃದ್ಧಿ ಸಮಿತಿ ಸದಸ್ಯ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ ಉಪಸ್ಥಿತರಿದ್ದರು.
No comments:
Post a Comment