ಕುಳೂರು ಶಾಲಾ ಮಕ್ಕಳಿಗೆ ಎಸ್. ಎಫ್. ಐ ಮಂಜೇಶ್ವರ ಏರಿಯ ಕಮಿಟಿ ವತಿಯಿಂದ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಿ. ಪಿ.ಎಂ ಜಿಲ್ಲಾ ಕಾರ್ಜಯಕಾರಿಣಿ ಸದಸ್ಯ ಕೆ. ಆರ್. ಜಯಾನಂದನ್ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಿದರು. ಕಾರ್ಯಕ್ರಮದಲ್ಲಿ ವಾರ್ಡ್ ಸದಸ್ಯೆ ಚಂದ್ರಾವತಿ ವಿ. ಪಿ, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಪ್ರಮೋದ್ ಶೆಟ್ಟಿ ಸಾಲೆದಪಡ್ಪು, ಮಾತೃ ಸಂಘದ ಅಧ್ಯಕ್ಷೆ ಆಶಾಲತ ಕುಳೂರು, ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪಿ, ಡಿ. ವೈ.ಎ.ಐ ಜಿಲ್ಲಾ ಸಮಿತಿ ಸದಸ್ಯ ಸಿದ್ದಿಕ್ ಚೆರುಗೋಳಿ, ಎಸ್. ಎಫ್. ಐ ಮಂಜೇಶ್ವರ ಏರಿಯಾ ಕಾರ್ಯದರ್ಶಿ ವಿನಯ್ ಕುಮಾರ್ ಬಾಯಾರ್, ಎಸ್. ಎಫ್. ಐ ಜಿಲ್ಲಾ ಸದಸ್ಯ ಮೊಹಮ್ಮದ್ ಅನೀಸ್, ಎಸ್. ಎಫ್. ಐ ಮಂಜೇಶ್ವರ ಏರಿಯಾ ಅಧ್ಯಕ್ಷ ನಿಖಿಲ್ ಉಪಸ್ಥಿತರಿದ್ದರು.
No comments:
Post a Comment