ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 'ಹಲೋ ಇಂಗ್ಲೀಷ್' ಕಾರ್ಯಕ್ರಮದ ಉದ್ಘಾಟನೆ ನಡೆಯಿತು.
ಕಾರ್ಯಕ್ರಮದಂಗವಾಗಿ ಶಾಲಾ ಶಿಕ್ಷಕಿ ಸೌಮ್ಯ ಪಿ ರವರು ಮಕ್ಕಳಿಗೆ ಹಾಗೂ ಹೆತ್ತವರಿಗೆ 'ಹಲೋ ಇಂಗ್ಲೀಷ್' ಭಾಗವಾಗಿ ತರಗತಿಯನ್ನು ನಡೆಸಿದರು. ಮಕ್ಕಳು ಹಾಗೂ ಹೆತ್ತವರಿಗೆ ಚಟುವಟಿಕೆಗಳು ಇನ್ನಷ್ಟು ಉಮ್ಮಸ್ಸು ತಂದಿರುವುದಲ್ಲದೆ ಸಕ್ರಿಯವಾಗಿ ಭಾಗವಹಿಸಿದರು. ಶಾಲಾ ಮಕ್ಕಳಿಂದ ಇಂಗ್ಲೀಷ್ ಕಿರು ಪ್ರಹಸನ ನಡೆಯಿತು. ಬಳಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷೆ ಪ್ರೇಮ ಜಿ ಶೆಟ್ಟಿ ಯವರು 'ಹಲೋ ಇಂಗ್ಲೀಷ್' ಲೋಗೋವನ್ನು ಅನಾವರಣ ಮಾಡಿ ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮಾ ರವರಿಗೆ ಹಸ್ತಾಂತರ ಮಾಡುವ ಮೂಲಕ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮಾತೃ ಸಂಘದ ಅಧ್ಯಕ್ಷೆ ಆಶಾಲತ ಕುಳೂರು, ಉಪಾಧ್ಯಕ್ಷೆ ಸುನೀತಾ ಹಾಗೂ ಪಿ.ಟಿ.ಎ ಸದಸ್ಯರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕರಾದ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಶಿಕ್ಷಕಿ ನಯನ ಎಂ ವಂದಿಸಿದರು. ನವಿನಾಕ್ಷಿ ಚಾರ್ಲ, ಅಶ್ವಿನಿ ಎಲಿಯಾಣ ಸಹಕರಿಸಿದರು.
No comments:
Post a Comment