FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Monday, 30 July 2018

ಆಟಿದ ಕೂಟ

ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಟಿ ತಿಂಗಳ ಮಹತ್ವವನ್ನು ಮಕ್ಕಳಿಗೆ ತಿಳಿಸುವ ಉದ್ದೇಶದಿಂದ ನಡೆಸಿದ 'ಆಟಿದ ಕೂಟ' ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಆ ಪ್ರಯುಕ್ತ ತುಳುನಾಡಿನಲ್ಲಿ ಆಟಿ ತಿಂಗಳ ಸಮಯದಲ್ಲಿ ತಯಾರಿಸುವ ವಿವಿಧ ಆಹಾರ ಪದಾರ್ಥಗಳ ಪ್ರದರ್ಶನ ಹಾಗೂ ಸವಿಯುವ ಅವಕಾಶವನ್ನು ಮಾಡಲಾಯಿತು. ಪತ್ರೊಡೆ, ಹಲಸಿನ ಗಟ್ಟಿ, ತಿಮರೆ ಚಟ್ನಿ (ಒಂದೆಲಗ), ತಜಂಕ್ ಹಲಸಿನ ಬೀಜ ಪಲ್ಯ, ಚೇಟ್ಲ, ಬಾಳೆದಿಂಡು ಉರುಳಿ ಘಸಿ, ಉರುಳಿ ಚಟ್ನಿ, ನುಗ್ಗೆಸೊಪ್ಪು ಪಲ್ಯ, ಬಾಳೆ ಪೂಂಬೆ ಚಟ್ನಿ, ಉಪ್ಪಿನಲ್ಲಿ ಹಾಕಿದ ಮಾವಿನಕಾಯಿ ಚಟ್ನಿ, ಉಪ್ಪಡ್ ಪಚ್ಚಿಲ್ (ಉಪ್ಪಿನಲ್ಲಿ ಹಾಕಿದ ಹಲಸಿನ ಸೋಳೆ ಪಲ್ಯ), ಮೆಣಸಿನಕಾಯಿ, ಪಪ್ಪಾಯಿ ಪಲ್ಯ, ಮೆಂತೆ ಮನ್ನಿ ಹೀಗೆ ಹಲವಾರು ಆಹಾರ ಪದಾರ್ಥಗಳ ಪ್ರದರ್ಶನ ಮಾಡುವ ಮೂಲಕ ಆಟಿ ತಿಂಗಳಲ್ಲಿ ತುಳುನಾಡಿನಲ್ಲಿ ತಯಾರಿಸುತ್ತಿದ್ದ ಆಹಾರ ಪದಾರ್ಥಗಳ ಪರಿಚಯವನ್ನು ಮಕ್ಕಳಿಗೆ ಮಾಡಿಸಲಾಯಿತು‌. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮಾ ರವರು ಆಟಿ ತಿಂಗಳ ವಿಶೇಷತೆಗಳನ್ನು ತಿಳಿಸಿದರು. ಬಳಿಕ ಬಾಳೆಎಲೆಯಲ್ಲಿ ಎಲ್ಲಾ ಆಹಾರ ಪದಾರ್ಥಗಳ ಸವಿಯನ್ನು ಸವಿಯಲಾಯಿತು. ಶಾಲಾ ಅಧ್ಯಾಪಕರಾದ ಜಯಪ್ರಶಾಂತ್ ಪಾಲೆಂಗ್ರಿ, ಶಿಕ್ಷಕಿಯರಾದ ಸೌಮ್ಯ ಪಿ, ನಯನ ಎಂ, ನವಿನಾಕ್ಷಿ ಚಾರ್ಲ, ಅಶ್ವಿನಿ ಎಲಿಯಾಣ, ರಮೀಝ, ಸಹಾಯಕಿಯರಾದ ಜಲಜ ಪೊಯ್ಯೆಲ್, ಲತಾ ಕಾರ್ಯಕ್ರಮ ಆಯೋಜಿಸಲು ಸಹಕರಿಸಿದರು.












No comments:

Post a Comment