FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Thursday, 5 July 2018

ಶಾಲಾ ಚುನಾವಣೆ

      ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ನಾಯಕನ ಆಯ್ಕೆಯನ್ನು ಮಕ್ಕಳ ಶಾಲಾ ಚುನಾವಣೆಯನ್ನು ನಡೆಸುವ ಮೂಲಕ ಪ್ರಜಾಪ್ರಭುತ್ವ ರೀತಿಯ ಆಡಳಿತವನ್ನು ಪರಿಚಯಿಸಲಾಯಿತು.
     ಚುನಾವಣೆಯ ಮುನ್ನಾ ದಿನ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ನಾಮಪತ್ರವನ್ನು ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮಾ ರವರಿಗೆ ಸಲ್ಲಿಸಿದರು.
      ಮರುದಿನ ನಡೆದ ಚುನಾವಣೆಯಲ್ಲಿ ಮತದಾರರು ಸರದಿ ಸಾಲಿನಲ್ಲಿ ಬಂದು ಚುನಾವಣಾ ಗುರುತನ್ನು ಕೈ ಬೆರಳಿಗೆ ಹಾಕಿಸಿ ತಮ್ಮ ನೆಚ್ಚಿನ ಅಭ್ಯರ್ಥಿಗೆ ಗೌಪ್ಯ ಮತದಾನದ ಮೂಲಕ ಮತ ಚಲಾಯಿಸಿದರು. ಚುನಾವಣೆಯ ಎಲ್ಲಾ ಪ್ರಕ್ರಿಯೆಯನ್ನು ಶಾಲಾ ಮಕ್ಕಳೇ ನಿರ್ವಹಿಸಿದ್ದು ವಿಶೇಷವಾಗಿತ್ತು. ಮತಗಟ್ಟೆಯ ಮುಖ್ಯ ಅಧಿಕಾರಿಯಾಗಿ ಕುಮಾರಿ ತೃಪ್ತಿ, ಅಧಿಕಾರಿಗಳಾಗಿ ಕುಮಾರಿ ನವ್ಯ, ಶ್ರೇಣಿಕ್ ಕರ್ಕೇರ ಹಾಗೂ ಶೃಂಚನ್ ಕಾರ್ಯ ನಿರ್ವಹಿಸಿದರು. ಬಳಿಕ ಮುಖ್ಯ ಚುನಾವಣಾಧಿಕಾರಿಯ ನೇತೃತ್ವದಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಿತು. ಮುಖ್ಯ ಚುನಾವಣಾಧಿಕಾರಿ ಫಲಿತಾಂಶ ಘೋಷಣೆ ಮಾಡುತ್ತಿದ್ದಂತೆ ವಿಜೇತ ಅಭ್ಯರ್ಥಿಯ ಬೆಂಬಲಿಗರ ಉದ್ಘೋಷ ಮುಗಿಲು ಮುಟ್ಟಿತ್ತು. ವಿಜಯ ಯಾತ್ರೆಯನ್ನು ನಡೆಸುವ ಮೂಲಕ ಗೆಲುವನ್ನು ಸಂಭ್ರಮಿಸಿದರು. ಶಾಲಾ ಮುಖ್ಯೋಪಾಧ್ಯಾಯರು ನಾಯಕನಾಗಿ ಆಯ್ಕೆಯಾದ ಕುಮಾರಿ ಸಾನ್ವಿಕ ಹಾಗೂ ಉಪನಾಯಕನಾಗಿ ಆಯ್ಕೆಯಾದ ಕಾರ್ತಿಕ್ ಕೆ ರವರಿಗೆ ಹೂಗುಚ್ಛ ನೀಡುವುದರ ಮೂಲಕ ಅಭಿನಂದಿಸಿದರು. ಬಳಿಕ ಆಯ್ಕೆಯಾದ ಅಭ್ಯರ್ಥಿಗಳ ಪ್ರಮಾಣ ವಚನವನ್ನು ಮುಖ್ಯೋಪಾಧ್ಯಾಯರು ಬೋಧಿಸಿದರು. ಕ್ರೀಡಾ ಮಂತ್ರಿ ಯಾಗಿ ದುರ್ಗಾಪ್ರಸಾದ್, ಆರೋಗ್ಯ ಮಂತ್ರಿಯಾಗಿ ಗಣ್ಯಶ್ರೀ ಅಧಿಕಾರ ಸ್ವೀಕರಿಸಿದರು. ಶಾಲಾ ಅಧ್ಯಾಪಕ ಜಯಪ್ರಶಾಂತ್ ಪಾಲೆಂಗ್ರಿ, ಅಧ್ಯಾಪಿಕೆಯರಾದ ಸೌಮ್ಯ ಪಿ, ನಯನ ಯಂ, ನವಿನಾಕ್ಷಿ ಚಾರ್ಲ ಹಾಗೂ ಅಶ್ವಿನಿ ಎಲಿಯಾಣ ಉಪಸ್ಥಿತರಿದ್ದು ಸಹಕರಿಸಿದರು.





No comments:

Post a Comment