2018-19 ನೇ ಸಾಲಿನ ಶಾಲಾ ಶೈಕ್ಷಣಿಕ ವರ್ಷದ ಕೊನೆಯ ದಿನವಾದ ತಾ. 29-03-2019 ನೇ ಶುಕ್ರವಾರದಂದು ನಾಲ್ಕನೇ ತರಗತಿ ಮಕ್ಕಳ ವಿದಾಯ ಕೂಟ ಸಮಾರಂಭವನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಪಿ. ಟಿ. ಎ ಅಧ್ಯಕ್ಷ ಶ್ರೀ ಪ್ರಮೋದ್ ಶೆಟ್ಟಿ ಸಾಲೆದಪಡ್ಪು, ಮಾತೃ ಪಿ. ಟಿ. ಎ ಅಧ್ಯಕ್ಷೆ ಶ್ರೀಮತಿ ಆಶಾಲತ ಕುಳೂರು, ಪ್ರೀ ಪ್ರೈಮರಿ ವಿಭಾಗದ ಪಿ. ಟಿ. ಎ ಅಧ್ಯಕ್ಷ ಕಮಲಾಕ್ಷ ಕಲ್ಕಾರ್, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮಾ ಉಪಸ್ಥಿತರಿದ್ದು ಶುಭ ಹಾರೈಸಿದರು. ಮಕ್ಕಳ ಹೆತ್ತವರ ಪರವಾಗಿ ಶ್ರೀಮತಿ ರಾಜಲಕ್ಷ್ಮಿ ದೇರಂಬಳ ಗುತ್ತು, ಶ್ರೀಮತಿ ರೇಣುಕ ಮಕ್ಕಳ ಮುಂದಿನ ಭವಿಷ್ಯಕ್ಕೆ ಶುಭ ಕೋರಿದರು. ಇದೇ ಸಂದರ್ಭದಲ್ಲಿ ನಾಲ್ಕನೇ ತರಗತಿ ಮಕ್ಕಳು ತಾವೇ ರಚಿಸಿ ಹಾಡಿದ 'ಬಿಟ್ಟೋಗಲ್ಲಾ ಶಾಲೆನಾ... ' ಹಾಡು ಎಲ್ಲರ ಮನ ಮುಟ್ಟಿ ಕಣ್ನಂಚಲ್ಲಿ ನೀರು ತರಿಸಿತು. ಶಾಲಾ ವಿದ್ಯಾರ್ಥಿಗಳಾದ ದುರ್ಗಾಪ್ರಸಾದ್ ಶಾಲೆಗೆ ಗಡಿಯಾರ, ಸಾನ್ವಿಕ ಹೂದಾಣಿ ಹಾಗೂ ವಿದ್ಯಾರ್ಥಿ ವೃಂದ ಅಧ್ಯಾಪಕ ವೃಂದಕ್ಕೆ ವಿವಿಧ ಉಡುಗೊರೆಗಳನ್ನು ನೀಡಿದರು. ತಮಗೆ ವಿದ್ಯೆಯನ್ನು ಕಲಿಸಿದ ಗುರು ವೃಂದಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು. ಶಾಲಾ ಅಧ್ಯಾಪಕ ವೃಂದ ಮಕ್ಕಳಿಗೆ ಶುಭ ಕೋರಿ ಹಾರೈಸಿದರು.
No comments:
Post a Comment