FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Wednesday, 27 March 2019

ಹಳೆ ವಿದ್ಯಾರ್ಥಿ ಸಂಘದ ಮಹಾಸಭೆ

           ಆತ್ಮೀಯ ವಿದ್ಯಾಭಿಮಾನಿಗಳೇ, ನಮ್ಮ ಹೆಮ್ಮೆಯ ಪ್ರತೀಕವಾಗಿರುವ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು ಕಳೆದ ಕೆಲವು ವರ್ಷಗಳಿಂದ ಎಲ್ಲರ ಸಹಕಾರದಿಂದ ಸಮಾಜಕ್ಕೆ ಮಾದರಿಯಾಗುವಂತೆ ಪುರೋಗತಿಯನ್ನು ಕಂಡು ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದು ನಮಗೆಲ್ಲಾ ಹೆಮ್ಮೆ. ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಕಳೆದ ಎರಡು ವರ್ಷಗಳ ಹಿಂದೆ ರೂಪುಗೊಂಡ ನಮ್ಮ ಶಾಲಾ ಹಳೆ ವಿದ್ಯಾರ್ಥಿ ಸಂಘ. ಎಲ್ಲಿಯೂ ಕಂಡು ಕೇಳರಿಯದ ರೀತಿಯಲ್ಲಿ ಪ್ರೋತ್ಸಾಹ ನೀಡುವುದರೊಂದಿಗೆ ಎಲ್ಲರೂ ನಿಬ್ಬೆರಗಾಗುವಂತೆ ಶಾಲಾ ಚಟುವಟಿಕೆ/ಕಾರ್ಯಕ್ರಮಗಳ ಜೊತೆಗೆ ಶಾಲೆಯಲ್ಲಿ ಹಲವಾರು ಬದಲಾವಣೆಗಳನ್ನು ಕಾಣುವಂತೆ ಮಾಡಿರುವುದು ಈಗ ಇತಿಹಾಸ. ಹಳೆ ವಿದ್ಯಾರ್ಥಿ ಸಂಘದ ದಿಟ್ಟ ಹೆಜ್ಜೆ, ಎಲ್ಲರ ಒಗ್ಗಟ್ಟು, ಸಹಕಾರ ಹಾಗೂ ದಕ್ಷ ಹಳೆ ವಿದ್ಯಾರ್ಥಿ ಸಂಘದ ಕಾರ್ಯಕಾರಿ ಸಮಿತಿಯ ಸ್ವಾರ್ಥ ರಹಿತ ಆಡಳಿತ ಎಲ್ಲವೂ ಕುಳೂರು ಶಾಲಾ ಚಿತ್ರಣವನ್ನೇ ಧನಾತ್ಮಕವಾಗಿ ಬದಲಾವಣೆ ಮಾಡಿದೆ.*
          ಹಳೆ ವಿದ್ಯಾರ್ಥಿ ಸಂಘ ರೂಪುಗೊಂಡಾಗ ತೆಗೆದುಕೊಂಡ ನಿರ್ಧಾರದಂತೆ ಪ್ರತಿ ಎರಡು ವರ್ಷಕ್ಕೊಮ್ಮೆ ಸಮಿತಿಯ ಪುನರ್ ರೂಪೀಕರಣ ನಡೆಯುತ್ತದೆ. ನಮ್ಮ ಈಗಿನ ಸಮಿತಿಗೆ ಈಗಾಗಲೇ ಎರಡು ವರ್ಷಗಳು ಆಗಿದ್ದು ಮುಂದಿನ ಎರಡು ವರ್ಷಗಳ ಅವಧಿಗೆ ಸಮಿತಿಯ ಪುನರ್ ರೂಪೀಕರಣ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಇದೇ ಬರುವ ತಾ. 29-03-2019 ನೇ ಶುಕ್ರವಾರದಂದು ಅಪರಾಹ್ನ ಗಂಟೆ 03:00 ಕ್ಕೆ ಸರಿಯಾಗಿ ಶಾಲಾ ಹಳೆ ವಿದ್ಯಾರ್ಥಿಗಳ ಮಹಾ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಶಾಲಾಭಿಮಾನಿಗಳಾದ ಎಲ್ಲಾ ಹಳೆ ವಿದ್ಯಾರ್ಥಿಗಳು ಭಾಗವಹಿಸಿ, ಸಲಹೆ ಸೂಚನೆಗಳನ್ನಿತ್ತು ಸಮಿತಿಯ ಪುನರ್ ರೂಪೀಕರಣದಲ್ಲಿ ಭಾಗಿಯಾಗಿ ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.

ಇತೀ,

ಕಾರ್ಯದರ್ಶಿ
ಹಳೆ ವಿದ್ಯಾರ್ಥಿ ಸಂಘ
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕುಳೂರು

ವಿ.ಸೂ: 2019-20 ನೇ ಸಾಲಿನ ಹಳೆ ವಿದ್ಯಾರ್ಥಿ ಸಂಘದ ಸದಸ್ಯತನವನ್ನು ಆರಂಭಿಸಲಾಗಿದೆ. ಸಮಿತಿಯಲ್ಲಿ ಸದಸ್ಯತ್ವವನ್ನು ಪಡೆಯಲು ವಾರ್ಷಿಕ ಸದಸ್ಯತನ ರೂ. 100, ಪಂಚ ವಾರ್ಷಿಕ ಸದಸ್ಯತನ ರೂ. 500 ಅಥವಾ ಅಜೀವ ಸದಸ್ಯತನ (ಹತ್ತು ವರ್ಷ) ರೂ. 1000 ತೆತ್ತು ನೂತನ ಹಳೆ ವಿದ್ಯಾರ್ಥಿ ಸಂಘದ ಸಕ್ರಿಯ ಸದಸ್ಯರಾಗಿ ಸಹಕರಿಸಬೇಕಾಗಿ ವಿನಂತಿ.

No comments:

Post a Comment