FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Monday, 1 July 2019

ಶಾಲಾ ಚುನಾವಣೆ 2019-20

         ಚುನಾವಣಾ ಅಭ್ಯರ್ಥಿಗಳ ಮೊಗದಲ್ಲಿ ಕಾತರ, ಅಭ್ಯರ್ಥಿಗಳ ಎದೆಯಲ್ಲಿ ಢವಢವ.. ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದವರ ಮುಖದಲ್ಲಿ ಸಂತಸ, ಚುನಾವಣಾ ಗುರುತನ್ನು ಕೈಗೆ ಹಾಕಿಸಿಕೊಂಡು ಮತದಾರರ ಸಂಭ್ರಮ.... ಚುನಾವಣಾ ಫಲಿತಾಂಶ ಘೋಷಣೆಯಾದಾಗ ಮುಗಿಲು ಮುಟ್ಟಿದ ವಿಜಯಿ ಅಭ್ಯರ್ಥಿಗಳ ಬೆಂಬಲಿಗರ ಉದ್ಘೋಷ..... ಬಳಿಕ ವಿಜಯ ಯಾತ್ರೆ, ಪ್ರಮಾಣ ವಚನ...... ಇದೆಲ್ಲಾ ಕಂಡುಬಂದದ್ದು ಕುಳೂರು ಶಾಲಾ ಚುನಾವಣೆಯಲ್ಲಿ....
         ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2019-20 ನೇ ಸಾಲಿನ ಶಾಲಾ ಚುನಾವಣೆಯು ಪ್ರಜಾಪ್ರಭುತ್ವ ಮಾದರಿಯಲ್ಲಿ ನಡೆದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಚುನಾವಣೆ ನಡೆಯುವ 2 ದಿನದ ಮೊದಲು ಶಾಲಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮಾ ರವರಿಗೆ ನೀಡಿದರು. ಚುನಾವಣಾ ದಿನದಂದು ಮತದಾರರು ತಮ್ಮ ಗುರುತಿನ ಚೀಟಿಯನ್ನು ಹಿಡಿದುಕೊಂಡು ಸರದಿ ಸಾಲಿನಲ್ಲಿ ಬಂದು ಮತ ಚಲಾಯಿಸಿದರು. ಮತದಾನ ಮಾಡಿದ ಗುರುತನ್ನು ಕೈಗೆ ಹಾಕಿಸಿಕೊಂಡು ಗೌಪ್ಯ ಮತದಾನದ ಮೂಲಕ ಮತ ಹಾಕಿದ್ದು ಪ್ರಜಾಪ್ರಭುತ್ವ ರೀತಿಯನ್ನು ನೆನಪಿಸುವಂತಿತ್ತು. ಜೊತೆಗೆ ಚುನಾವಣೆಯ ಎಲ್ಲಾ ಕಾರ್ಯಗಳನ್ನು ಮಕ್ಕಳೇ ನಡೆಸಿದ್ದು ವಿಶೇಷವಾಗಿತ್ತು.
       ಬಳಿಕ ಮತ ಎಣಿಕೆಯು ಮುಖ್ಯ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ನಡೆಯಿತು. ಮುಖ್ಯ ಚುನಾವಣಾಧಿಕಾರಿಗಳು ವಿಜೇತ ಅಭ್ಯರ್ಥಿಯ ಹೆಸರನ್ನು ಘೋಷಣೆಯಾಗುತ್ತಿದ್ದಂತೆ ವಿಜೇತ ಅಭ್ಯರ್ಥಿಯ ಬೆಂಬಲಿಗರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಶಾಲಾ ನಾಯಕಿಯಾಗಿ ನವ್ಯ, ಉಪನಾಯಕನಾಗಿ ಯಜ್ಞೇಶ್ ಕೆ ಆಯ್ಕೆಯಾದರು. ಕ್ರೀಡಾ ಮಂತ್ರಿಯಾಗಿ ಶ್ರೇಣಿಕ್ ಕರ್ಕೇರ, ಆರೋಗ್ಯ ಮಂತ್ರಿಯಾಗಿ ಅಬ್ದುಲ್ ರಸ್ವೀನ್ ಎ. ಕೆ ಆಯ್ಕೆಯಾದರು. ಮುಖ್ಯ ಚುನಾವಣಾಧಿಕಾರಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಬಳಿಕ ವಿಜೇತ ಅಭ್ಯರ್ಥಿಗಳ ವಿಜಯ ಯಾತ್ರೆ ನಡೆಯಿತು. ವಿಜೇತ ಅಭ್ಯರ್ಥಿಗಳನ್ನು ಎತ್ತಿಕೊಂಡು ಮೆರವಣಿಗೆ ನಡೆಸಿದರು. ಶಾಲಾ ಚುನಾವಣೆಯಲ್ಲಿ ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದು, ಸಹಕರಿಸಿದರು.

















No comments:

Post a Comment