ನಮ್ಮ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆ ಹಾಗೂ ಬಾಲಸಭೆಯ ಉದ್ಘಾಟನೆಯು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಮುಖ್ಯ ಶಿಕ್ಷಕರಾದ ಸತ್ಯನಾರಾಯಣ ಶರ್ಮಾ ಪಿ ರವರು ನೆರವೇರಿಸಿದರು. ಅಧ್ಯಕ್ಷತೆಯನ್ನು ಶಾಲಾ ನಾಯಕಿ ಕುಮಾರಿ ನವ್ಯ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ ಶಾಲಾ ಮಕ್ಕಳಿಂದ ರಚಿತವಾದ 'ಚಿತ್ತಾರ' ಹಸ್ತ ಪತ್ರಿಕೆಯನ್ನು ಬಿಡುಗಡೆಗೊಳಿಸಿ 'ಮಕ್ಕಳ ಸುಪ್ತ ಪ್ರತಿಭೆಯನ್ನು ಪ್ರದರ್ಶಿಸಲು ಬಾಲಸಭೆಯು ಸೂಕ್ತ ವೇದಿಕೆ. ಇದನ್ನು ಮಕ್ಕಳು ಸರಿಯಾಗಿ ಬಳಸಿಕೊಳ್ಳಿ' ಎಂದು ಮಕ್ಕಳಿಗೆ ಕರೆಯಿತ್ತರು. ಶಾಲಾ ವಿದ್ಯಾರ್ಥಿ ವಿನೀತ್ ಸ್ವಾಗತಿಸಿ, ವಿದ್ಯಾರ್ಥಿ ಯಜ್ಞೇಶ್ ವಂದಿಸಿದನು. ವಿದ್ಯಾರ್ಥಿ ಶ್ರೇಣಿಕ್ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ಜರಗಿದವು.

No comments:
Post a Comment