ನಮ್ಮ ಕುಳೂರು ಶಾಲೆಯಲ್ಲಿ ಈ ವರ್ಷವೂ ತೊಂಡೆ ಕೃಷಿ ಮಾಡುವ ಸಲುವಾಗಿ ಇಂದು ತೊಂಡೆ ಬಳ್ಳಿಯನ್ನು ನೆಡುವ ಕೆಲಸವನ್ನು ಶ್ರಮದಾನದ ಮೂಲಕ ಮಾಡಲಾಯಿತು. ಈ ಶ್ರಮದಾನದಲ್ಲಿ ಶಾಲಾ ಹಳೆ ವಿದ್ಯಾರ್ಥಿಗಳು ಭಾಗವಹಿಸಿ ಯಶಸ್ಸುಗೊಳಿಸಿದರು. ಎಲ್ಲರಿಗೂ ಲಘು ಉಪಹಾರದ ವ್ಯವಸ್ಥೆಯನ್ನು ಶಾಲಾ ಹಳೆ ವಿದ್ಯಾರ್ಥಿ ಸಂಘದ ಸದಸ್ಯ ಶ್ರೀ ಚಂದ್ರಹಾಸ ಪೂಜಾರಿ ಕುಳೂರು ಮಾಡುವ ಮೂಲಕ ಸಹಕರಿಸಿದರು. ಎಲ್ಲರಿಗೂ ಶಾಲಾ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ.
No comments:
Post a Comment