FLASH NEWS
Monday, 3 August 2020
ಶಾಲಾ ಮಕ್ಕಳಿಗೆ ಕಿಟ್ ವಿತರಣೆ
ಕೊರೋನದಿಂದ ಸ್ತಬ್ಧವಾಗಿರುವ ಶಿಕ್ಷಣ ಸಂಸ್ಥೆಗಳಿಂದಾಗಿ ಮಕ್ಕಳೆಲ್ಲ ಮನೆಯಲ್ಲೇ ಉಳಿಯುವಂತಾಗಿದ್ದು, ಕಷ್ಟದಲ್ಲಿರುವ ಈ ಶಾಲಾ ಮಕ್ಕಳಿಗೆ ಸಹಾಯವಾಗಲೆಂದು ಕೇರಳ ಸರಕಾರವು ಶಾಲಾ ಮಕ್ಕಳ ಮಧ್ಯಾಹ್ನದೂಟದ ಭಾಗವಾಗಿ ನೀಡಿದ ಆಹಾರ ಕಿಟ್ ವಿತರಣೆಯು ಇಂದು ನಡೆಯಿತು. ಕಿಟ್ ವಿತರಣೆಯ ಉದ್ಘಾಟನೆಯನ್ನು ವಾರ್ಡ್ ಸದಸ್ಯೆ ಶ್ರೀಮತಿ ಚಂದ್ರಾವತಿ ವಿ. ಪಿ ನೆರವೇರಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪಿ, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಜಯರಾಜ್ ಶೆಟ್ಟಿ ಚಾರ್ಲ ಉಪಸ್ಥಿತರಿದ್ದರು. ರಕ್ಷಕರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಕಿಟ್ ಪಡೆದುಕೊಂಡರು.
Subscribe to:
Post Comments (Atom)
No comments:
Post a Comment