ಇಂದು ನಮ್ಮ ಕುಳೂರು ಶಾಲಾ ತರಕಾರಿ ತೋಟದ ತೊಂಡೆ ಕೃಷಿಗೆ ಚಪ್ಪರದ ಕೆಲಸಕ್ಕಾಗಿ ಶ್ರಮದಾನ ಮಾಡಲಾಯಿತು. ಜೊತೆಗೆ ತೆಂಗಿನ ಬುಡ ಬಿಡಿಸಿ ಸೊಪ್ಪು ಹಾಕಲಾಯಿತು. ಈ ಶ್ರಮದಾನದಲ್ಲಿ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ, ಹಳೆ ವಿದ್ಯಾರ್ಥಿ ಸಂಘದ ಸಕ್ರಿಯ ಸದಸ್ಯ ಹರಿರಾಮ ಕುಳೂರು, ಯತೀಶ್ (ನಂದು) ಕುಳೂರು ಹಾಗೂ ಶಾಲಾ ಶಿಕ್ಷಕ ವೃಂದ ಭಾಗವಹಿಸಿದರು. ಎಲ್ಲರಿಗೂ ಶಾಲಾ ಪರವಾಗಿ ತುಂಬು ಹೃದಯದ ಧನ್ಯವಾದಗಳು...
No comments:
Post a Comment