ರಾಜ್ಯದಲ್ಲಿನ ಶಾಲೆಗಳ ಮಧ್ಯಾಹ್ನದೂಟದಲ್ಲಿ ವ್ಯವಸ್ಥೆಗಳ ಬಗ್ಗೆ ತಿಳಿದು ವರದಿ ತಯಾರಿಸಲು ಸೋಶಿಯೋ ಆಡಿಟ್ ಭಾಗವಾಗಿ ಅಧಿಕಾರಿಗಳು ನಮ್ಮ ಕುಳೂರು ಶಾಲೆಗೆ ಭೇಟಿ ನೀಡಿ ಶಾಲಾ ರಕ್ಷಕರು ಹಾಗೂ ಮಕ್ಕಳೊಂದಿಗೆ ಶಾಲಾ ಸಭೆ ನಡೆಸಿದರು.
ಈ ಆಡೀಟ್ ಗೆ ಮಂಜೇಶ್ವರ ಉಪಜಿಲ್ಲೆಯಲ್ಲಿ ಆಯ್ಕೆಯಾದ 5 ಶಾಲೆಗಳಲ್ಲಿ ಒಂದಾದ ನಮ್ಮ ಕುಳೂರು ಶಾಲೆಗೆ ಸೋಶಿಯೋ ಆಡಿಟ್ ಅಧಿಕಾರಿ ಶ್ರೀ ರಾಜಾರಾಮ್, ಮಂಜೇಶ್ವರ ಎಂ.ಡಿ.ಎಂ ಅಧಿಕಾರಿ ಶ್ರೀ ಪ್ರದೀಪ್, ಮೀಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ಜೂನಿಯರ್ ಹೆಲ್ತ್ ಇನ್ಸ್ಪೆಕ್ಟರ್ ಶ್ರೀಮತಿ ನಝೀಲ ಮುಂತಾದವರು ನಿಯೋಗದಲ್ಲಿದ್ದರು.ಆ ಪ್ರಯುಕ್ತ ನಡೆದ ಶಾಲಾ ಸಭೆಯಲ್ಲಿ ಅಧ್ಯಕ್ಷತೆಯನ್ನು ವಾರ್ಡ್ ಸದಸ್ಯರಾದ ಶ್ರೀ ಜನಾರ್ಧನ ಪೂಜಾರಿ ವಹಿಸಿದ್ದರು. ಶಾಲಾ ಮಧ್ಯಾಹ್ನದೂಟದ ಕುರಿತಾದ ವರದಿಯನ್ನು ಶಾಲಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ಸತೀಶ್ ಎಲಿಯಾಣ ಮಂಡಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಾಲಾ ರಕ್ಷಕರು ಹಾಗೂ ಮಕ್ಕಳೊಂದಿಗೆ ಮಧ್ಯಾಹ್ನದೂಟದ ಕುರಿತಾಗಿ ಅಧಿಕಾರಿಗಳು ಸಂವಾದ ನಡೆಸಿದರು.
ಶಾಲಾ ಶಿಕ್ಷಕಿ ಶ್ರೀಮತಿ ಸೌಮ್ಯ ಪಿ ಸ್ವಾಗತಿಸಿ, ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ವಂದಿಸಿದರು.
No comments:
Post a Comment