ಇಂದು ನಮ್ಮ ಶಾಲೆಯ ಒಂದು ಮತ್ತು ಎರಡನೇ ತರಗತಿ ಮಕ್ಕಳ ರಚನೆಯ ಸಂಯುಕ್ತ ಡೈರಿ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಆ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದಲ್ಲಿ ಒಂದನೇ ತರಗತಿಯ ಮಕ್ಕಳಿಂದ ರಚಿತವಾದ 'ಮೆಲುಕು' ಸಂಯುಕ್ತ ಡೈರಿಯನ್ನು ರಕ್ಷಕರಾದ ಶ್ರೀ ಜಯರಾಜ್ ಶೆಟ್ಟಿ ಚಾರ್ಲ ರವರು ಬಿಡುಗಡೆಗೊಳಿಸಿದರು.ಎರಡನೇ ತರಗತಿಯ ಮಕ್ಕಳಿಂದ ರಚಿತವಾದ 'ಹುರುಪ್' ಸಂಯುಕ್ತ ಡೈರಿಯನ್ನು ರಕ್ಷಕರಾದ ಶ್ರೀಮತಿ ಉಷಾ ಆದರ್ಶ ನಗರ ರವರು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ರವರು ಶುಭ ಹಾರೈಸಿದರು. ರಕ್ಷಕರು ಹಾಗೂ ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದು ಸಹಕರಿಸಿದರು.
ಇದೇ ಸಂದರ್ಭದಲ್ಲಿ ಮಕ್ಕಳ ರಚನೆಯ ವೀಡಿಯೋ ಪ್ರದರ್ಶನ ನಡೆಯಿತು.
ಶಾಲಾ ಶಿಕ್ಷಕಿ ಶ್ರೀಮತಿ ನಯನ ಎಂ ಸ್ವಾಗತಿಸಿ, ಶ್ರೀಮತಿ ಶ್ವೇತ ಇ ವಂದಿಸಿದರು.
No comments:
Post a Comment