ಮಂಜೇಶ್ವರ ಉಪಜಿಲ್ಲಾ ಮಟ್ಟದ ಕ್ರೀಡಾಕೂಟವು ಮಣ್ಣಂಗುಳಿ ಶಾಲಾ ಮೈದಾನದಲ್ಲಿ ನಡೆಯಿತು. ನಮ್ಮ ಶಾಲಾ ಮಕ್ಕಳು ಹೆಚ್ಚಿನ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ತೋರಿದರು. ಹುಡುಗಿಯರ ಮಿನಿ 50 ಮೀಟರ್ ಓಟದ ಸ್ಪರ್ಧೆಯಲ್ಲಿ 2 ನೇ ತರಗತಿಯ ನವ್ಯ ತೃತೀಯ ಸ್ಥಾನ ಗಳಿಸಿ ಶಾಲೆಗೂ, ಊರಿಗೂ ಕೀರ್ತಿ ತಂದಳು. ಅವಳಿಗೆ ಶಾಲಾ ಶಿಕ್ಷಕ ವೃಂದ, ಪಿ.ಟಿ.ಎ, ಮಾತೃ ಸಂಘ, ಹಳೆ ವಿದ್ಯಾರ್ಥಿ ಸಂಘ, ಶಾಲಾಭಿವೃದ್ಧಿ ಸಮಿತಿ ಹಾಗೂ ಊರವರಿಂದ ಅಭಿನಂದನೆಗಳು...
No comments:
Post a Comment