ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವವು ಮೀಯಪದವು ಯು.ಪಿ ಹಾಗೂ ಪ್ರೌಢ ಶಾಲೆಗಳಲ್ಲಿ ನಡೆಯಿತು. ನಮ್ಮ ಶಾಲೆಯ ವಿದ್ಯಾರ್ಥಿಗಳು ಹೆಚ್ಚಿನ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ತೋರಿಸಿದರು. ವೃತ್ತಿ ಪರಿಚಯ ಮೇಳದಲ್ಲಿ ತೆಂಗಿನ ಗೆರಟೆಯ ಉತ್ಪನ್ನಗಳ ನಿರ್ಮಾಣದಲ್ಲಿ ಲಕ್ಷ್ಮಣ 'ಎ' ಗ್ರೇಡ್'ನೊಂದಿಗೆ ಪ್ರಥಮ ಸ್ಥಾನ, ವಾಲಿಬಾಲ್ ನೆಟ್ ನಿರ್ಮಾಣದಲ್ಲಿ ಹೇಮಂತ್ 'ಎ' ಗ್ರೇಡ್'ನೊಂದಿಗೆ ಪ್ರಥಮ ಸ್ಥಾನ, ಬರೆಯುವ ಚೋಕ್ ನಿರ್ಮಾಣದಲ್ಲಿ ಶ್ರೇಯಾ ಕರ್ಕೇರ 'ಎ' ಗ್ರೇಡ್'ನೊಂದಿಗೆ ದ್ವಿತೀಯ ಸ್ಥಾನ, ಮೆಟಲ್ ಎಂಗ್ರೇವಿಂಗ್'ನಲ್ಲಿ ಶ್ರವಣ್ ಕುಮಾರ್ 'ಎ' ಗ್ರೇಡ್'ನೊಂದಿಗೆ ದ್ವಿತೀಯ ಸ್ಥಾನ, ತಾಳೆ ಗರಿಯ ಉತ್ಪನ್ನಗಳ ನಿರ್ಮಾಣದಲ್ಲಿ ವರ್ಷಾ ಬಿ 'ಎ' ಗ್ರೇಡ್'ನೊಂದಿಗೆ ದ್ವಿತೀಯ ಸ್ಥಾನ ಹಾಗೂ ಮೆಟಲ್ ವರ್ಕ್'ನಲ್ಲಿ ನಾಗರತ್ನ 'ಎ' ಗ್ರೇಡ್'ನೊಂದಿಗೆ ದ್ವಿತೀಯ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಗಣಿತ ಜಾಣ್ಮೆ ಪ್ರಶ್ನೆಯ ಸ್ಪರ್ಧೆಯಲ್ಲಿ ಭುವನ ಕೆ 'ಎ' ಗ್ರೇಡ್, ಸಮಾಜ ವಿಜ್ಞಾನ ವಿಭಾಗದ ಮೋಡೆಲ್'ನಲ್ಲಿ ಸಾನ್ವಿಕ ಹಾಗೂ ನವ್ಯ 'ಎ' ಗ್ರೇಡ್ ಪಡೆದುಕೊಂಡಿದ್ದಾರೆ.
No comments:
Post a Comment