ನಮ್ಮ ಶಾಲೆಯಲ್ಲಿ ದೀಪಾವಳಿ ಆಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಸಾಲು ಹಣತೆಗಳನ್ನು ಹಚ್ಚಿ, ವಿವಿಧ ಪಟಾಕಿಗಳನ್ನು ಸಿಡಿಸಿ ಮಕ್ಕಳು ಸಂಭ್ರಮಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮಾ ರವರು ದೀಪಾವಳಿಯ ಹಿನ್ನೆಲೆಯನ್ನು ಕಥೆ ಹೇಳುವುದರೊಂದಿಗೆ ಮಕ್ಕಳಿಗೆ ವಿವರಿಸಿದರು. ಮಧ್ಯಾಹ್ನ ಪಾಯಸದ ಊಟ ಹಾಗೂ ಸಿಹಿತಿಂಡಿಗಳನ್ನು ವಿತರಿಸಲಾಯಿತು. ಶಾಲಾ ಅಧ್ಯಾಪಕರಾದ ಶ್ರೀ ಜಯಪ್ರಶಾಂತ್ ಪಿ, ಸೌಮ್ಯ ಪಿ, ಕುಮಾರಿ ರೇಷ್ಮ, ಕುಮಾರಿ ಶ್ವೇತ ಹಾಗೂ ಗಂಜಿ ಬೇಯಿಸುವ ಜಲಜ ರವರು ಉಪಸ್ಥಿತರಿದ್ದು ಸಹಕರಿಸಿದರು.
No comments:
Post a Comment