ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಆ ಪ್ರಯುಕ್ತ ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮಾ ರವರು ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಯವರು ಜೀವನ ಸಾಧನೆಯನ್ನು ಮಕ್ಕಳಿಗೆ ವಿವರಿಸಿದರು. ಬಳಿಕ ಮಕ್ಕಳಿಂದ ಶಾಲಾ ಪರಿಸರದ ಶುಚೀಕರಣ ನಡೆಯಿತು. ಪರಿಸರ ಶುಚೀಕರಣದಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳು ಸಹಕರಿಸಿದರು. ಶಾಲಾ ಅಧ್ಯಾಪಕರಾದ ಜಯಪ್ರಶಾಂತ್ ಪಾಲೆಂಗ್ರಿ, ಸೌಮ್ಯ ಪಿ ಹಾಗೂ ಶ್ವೇತಾ ನೇತೃತ್ವ ವಹಿಸಿದರು.
No comments:
Post a Comment