ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಮಹಾಸಭೆಯು ಇಂದು ಶಾಲೆಯಲ್ಲಿ ನಡೆಯಿತು.
2024 ರಲ್ಲಿ ನೂರು ವರ್ಷಗಳನ್ನು ಪೂರೈಸುವ ಕುಳೂರು ಶಾಲೆಯ ಮುಂದಿನ ಹಲವಾರು ನಿರೀಕ್ಷೆಯ ಅಭಿವೃದ್ಧಿ ಕಾರ್ಯಗಳನ್ನು ಮುನ್ನಡೆಸಲು ಪ್ರಮುಖ ನೇತೃತ್ವ ವಹಿಸಲಿರುವ ಶಾಲಾ ಹಳೆ ವಿದ್ಯಾರ್ಥಿ ಸಂಘವು ಕಳೆದ ಹಲವು ವರ್ಷಗಳಲ್ಲಿ ಕುಳೂರು ಶಾಲೆಯಲ್ಲಿ ಸಕ್ರಿಯ ಕಾರ್ಯ ಚಟುವಟಿಕೆಗಳನ್ನು ನಡೆಸಿ ಎಲ್ಲರ ಗಮನ ಸೆಳೆದಿದೆ. ಈ ಸಂಘವು ಪ್ರಾರಂಭವಾದಾಗಿನಿಂದ ಇಲ್ಲಿತನಕ ಕುಳೂರು ಶಾಲೆಯಲ್ಲಿ ಮಹತ್ತರವಾದ ಅಭಿವೃದ್ಧಿ ಕಾರ್ಯಗಳು ನಡೆದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಎರಡು ವರ್ಷಗಳಿಗೊಮ್ಮೆ ನಡೆಯುವ ನೂತನ ಸಮಿತಿ ರೂಪೀಕರಣದ ಭಾಗವಾಗಿ ಇಂದು ಮಹಾಸಭೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಹಾಜಿ ಕಂಚಿಲ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಹಳೆ ವಿದ್ಯಾರ್ಥಿ ಸಂಘದ ಸದಸ್ಯ ಹಾಗೂ ಮೀಂಜ ಗ್ರಾಮ ಪಂಚಾಯತು ಸದಸ್ಯ ಜನಾರ್ದನ ಪೂಜಾರಿ ಕುಳೂರು, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ ಪೊಯ್ಶೆಲ್, ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ, ಕೃಷ್ಣವೇಣಿ ಕುಳೂರು ಪಾದೆ, ಕೋಶಾಧಿಕಾರಿ ಚಿಕ್ಕಪ್ಪ ಶೆಟ್ಟಿ ಎಲಿಯಾಣ ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಕುಳೂರು ವರದಿ ವಾಚನ ಮಾಡಿದರು.
ಶಾಲಾ ಹಳೆ ವಿದ್ಯಾರ್ಥಿಗಳಾದ ಜಗದೀಶ್ ಶೆಟ್ಟಿ ಎಲಿಯಾಣ, ಶುಭಾನಂದ ಶೆಟ್ಟಿ ಕೊಣಿಮಾರ್ ಕುಳೂರು, ಸುದೇಶ್ ಶೆಟ್ಟಿ ಕುಳೂರು ಹೊಸಮನೆ, ಉದಯ ಸಿ. ಎಚ್ ಚಿನಾಲ, ಅಭಿಜಿತ್ ಶೆಟ್ಟಿ ಕೊಂಡಾಣ ಗುತ್ತು, ಜಯಪ್ರಕಾಶ್ ಶೆಟ್ಟಿ ಅಂಗಡಿದಾರ್, ಹರಿರಾಮ ಕುಳೂರು ಮೊದಲಾದವರು ಶಾಲೆಯ ಆಗು ಹೋಗುಗಳ ಬಗ್ಗೆ ಅಭಿಮಾನದ ಮಾತುಗಳನ್ನಾಡಿದರು.
ಬಳಿಕ ನೂತನ ಸಮಿತಿ ರೂಪೀಕರಣ ನಡೆಯಿತು. ಅಧ್ಯಕ್ಷರಾಗಿ ಮೊಹಮ್ಮದ್ ಹಾಜಿ ಕಂಚಿಲರವರು ಅವಿರೋಧವಾಗಿ ಪುನರಾಯ್ಕೆಯಾದರು. ಉಪಾಧ್ಯಕ್ಷರುಗಳಾಗಿ ಬಾಲಕೃಷ್ಣ ಶೆಟ್ಟಿ ಪೊಯ್ಶೆಲ್, ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ, ಕೃಷ್ಣವೇಣಿ ಕುಳೂರು ಪಾದೆ, ಶಿವಪ್ರಸಾದ್ ಶೆಟ್ಟಿ ಕೊಡಿಮಾರ್ ಕುಳೂರು, ಆಶಾಲತಾ ಕುಳೂರು, ಪ್ರಧಾನ ಕಾರ್ಯದರ್ಶಿಯಾಗಿ ಜಯರಾಜ್ ಶೆಟ್ಟಿ ಚಾರ್ಲ, ಜತೆ ಕಾರ್ಯದರ್ಶಿಗಳಾಗಿ ವಸಂತ ಪೂಜಾರಿ ಕುಳೂರು, ಅಬ್ದುಲ್ ಮಜೀದ್ ಸಾಹೇಬ್ ಚಾರ್ಲ, ಕೋಶಾಧಿಕಾರಿಯಾಗಿ ಸುಧಾಕರ ಶೆಟ್ಟಿ ಎಲಿಯಾಣ ಅವಿರೋಧವಾಗಿ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಚಂದ್ರಹಾಸ ಪೂಜಾರಿ ಕುಳೂರು, ಚಿಕ್ಕಪ್ಪ ಶೆಟ್ಟಿ ಎಲಿಯಾಣ, ಹರಿರಾಮ ಕುಳೂರು, ಜನಾರ್ದನ ಪೂಜಾರಿ ಕುಳೂರು, ಸದಾಶಿವ ಸೇನವ ನಾರ್ಣಹಿತ್ಲು, ಶುಭಾನಂದ ಶೆಟ್ಟಿ ಕೊಣಿಮಾರ್ ಕುಳೂರು, ದೇವದಾಸ್ ಕುಳೂರು, ಜಯಪ್ರಕಾಶ್ ಶೆಟ್ಟಿ ಅಂಗಡಿದಾರ್, ಶಶಿಕುಮಾರ್ ಕುಳೂರು, ರಾಜೇಶ್ ಸೇನವ ನಾರ್ಣಹಿತ್ಲು, ಅಶೋಕ್ ಶೆಟ್ಟಿ ಕಲ್ಲಾಯಿ, ಉದಯ ಸಿ.ಎಚ್ ಚಿನಾಲ, ರಂಜಿತ್ ಕುಳೂರು, ರವಿಪ್ರಸಾದ್ ಕರಿಪ್ಪಾರ್, ಯತೀಶ್ ಕುಳೂರು, ಪ್ರಶಾಂತ್ ಕುಳೂರು, ವಸಂತ ಹೊಸಗದ್ದೆ, ಸಂದೀಪ್ ಕುಳೂರು ರವರನ್ನು ಆಯ್ಕೆ ಮಾಡಲಾಯಿತು.
ನೂತನ ಸಮಿತಿಗೆ ಜವಾಬ್ದಾರಿ ಹಸ್ತಾಂತರ ಮಾಡಲಾಯಿತು. ಶಾಲಾ ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ಸಮಿತಿ ರೂಪೀಕರಣವನ್ನು ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಹಾಗೂ ಎಸ್. ಎ. ಟಿ ಶಾಲಾ ಅಧ್ಯಾಪಕರೂ ಆಗಿರುವ ಜಯಪ್ರಕಾಶ್ ಅಂಗಡಿದಾರ್ ರವರು ಶಾಲೆಯ ಬಗ್ಗೆ ಬರೆದ ಲೇಖನವನ್ನು ವಾಚಿಸಿ ಗಮನ ಸೆಳೆದರು. ಜೊತೆಗೆ ಶಾಲೆಯ ಪ್ರೀ ಪ್ರೈಮರಿ ವಿಭಾಗದ ಜವಾಬ್ದಾರಿ ಹೊತ್ತಿರುವ ಹಳೆ ವಿದ್ಯಾರ್ಥಿ ಸಂಘವು, ಈ ಶೈಕ್ಷಣಿಕ ವರ್ಷದ ಅಧ್ಯಾಪಿಕೆಯ ಮೊದಲ ತಿಂಗಳ ಪ್ರೋತ್ಸಾಹ ಧನವನ್ನು ಅಧ್ಯಕ್ಷರಾದ ಮೊಹಮ್ಮದ್ ಹಾಜಿ ಕಂಚಿಲರವರು ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದರು. ಶಶಿ ಕುಮಾರ್ ಕುಳೂರು ಸ್ವಾಗತಿಸಿ, ಶಿಕ್ಷಕಿ ಸೌಮ್ಯ ಪಿ ವಂದಿಸಿದರು.
No comments:
Post a Comment