FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Monday, 20 June 2022

ರಕ್ಷಕ-ಶಿಕ್ಷಕ ಸಂಘದ ಮಹಾಸಭೆ : ನೂತನ ಸಮಿತಿ ರೂಪೀಕರಣ

        ನಮ್ಮ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ ಇಂದು ನಡೆಯಿತು.

         ಸಭೆಯ ಅಧ್ಯಕ್ಷತೆಯನ್ನು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಸತೀಶ್ ಎಲಿಯಾಣ ವಹಿಸಿದ್ದರು. ಮಾತೃ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಪ್ರೇಮ ಜಿ ಶೆಟ್ಟಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.

          ಶಾಲಾ ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ಮಂಡನೆ ಮಾಡಿದರು. ನಂತರ ಮಲಯಾಳಂ ಭಾಷಾ ಕಲಿಕೆಯ ಬಗ್ಗೆ ಚರ್ಚೆ ಮಾಡಲಾಯಿತು.

         ಬಳಿಕ 2022-23 ನೇ ಸಾಲಿನ ನೂತನ ರಕ್ಷಕ-ಶಿಕ್ಷಕ ಸಂಘದ ಸಮಿತಿ ರೂಪೀಕರಣ ನಡೆಸಲಾಯಿತು. ಅಧ್ಯಕ್ಷರಾಗಿ ಸತೀಶ್ ಎಲಿಯಾಣರವರು ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಯೋಗೀಶ್ ಶೆಟ್ಟಿ ಪೊಯ್ಯೆಲ್ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಯರಾಜ್ ಶೆಟ್ಟಿ ಚಾರ್ಲ, ಹರೀಶ್ ನಾಯಕ್ ಕುಳಬೈಲು, ದಯಾನಂದ ಕರಿಪ್ಪಾರ್, ಹೇಮಲತಾ ಕುಳೂರು, ಮೀನಾಕ್ಷಿ ಬೊಡ್ಡೋಡಿ, ಸುನೀತಾ ಕುಳೂರು, ರೇಷ್ಮಾ ಕುಳೂರು, ಲೀಲಾವತಿ ಚಿನಾಲ, ದಿವ್ಯ ಶಾಲೆದಪಡ್ಪು, ಶೋಭಾ ಸಂತಡ್ಕ, ಶಾರದಾ ಕುಳೂರು, ಉಷಾ ಆದರ್ಶ ನಗರ, ಸುಚರಿತ ಚಿನಾಲ, ಚೈತ್ರ ಕಲ್ಕಾರ್, ನಳಿನಾಕ್ಷಿ ಕೆಮಜಾಲ್, ಉದಯಕುಮಾರಿ ಕುಳೂರು ಹಾಗೂ ಲೀಲಾವತಿ ಕುಳೂರು ಕನ್ಯಾನ ಆಯ್ಕೆಯಾದರು.

        ನಂತರ ನಡೆದ ಮಾತೆಯರ ರಕ್ಷಕ-ಶಿಕ್ಷಕ ಸಂಘದ ಸಭೆಯಲ್ಲಿ ನೂತನ ಅಧ್ಯಕ್ಷೆಯಾಗಿ ಸುನೀತಾ ಕುಳೂರು ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷೆಯಾಗಿ ಮೀನಾಕ್ಷಿ ಬೊಡ್ಡೋಡಿ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಉದಯ ಕುಮಾರಿ ಕುಳೂರು, ಲೀಲಾವತಿ ಕುಳೂರು ಕನ್ಯಾನ, ದಿವ್ಯ ಶಾಲೆದಪಡ್ಪು, ಹೇಮಲತಾ ಕುಳೂರು, ಶೋಭಾ ಸಂತಡ್ಕ,ರೇಷ್ಮಾ ಕುಳೂರು, ಸುಚರಿತ ಚಿನಾಲ, ಉಷಾ ಆದರ್ಶ ನಗರ, ನಳಿನಾಕ್ಷಿ ಕೆಮಜಾಲ್, ಚೈತ್ರ ಕಲ್ಕಾರ್, ಲೀಲಾವತಿ ಚಿನಾಲ, ಶಾರದಾ ಕುಳೂರು, ಸುಶೀಲ ಕೆಮಜಾಲ್, ಸುಹಾಸಿನಿ ಕುಳೂರು ಆಯ್ಕೆಯಾದರು. ಪ್ರೀ ಪ್ರೈಮರಿ ವಿಭಾಗದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಸುಹಾಸಿನಿ ಕುಳೂರು ಆಯ್ಕೆಯಾದರು.

         ಶಾಲಾ ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಶಿಕ್ಷಕಿ ಸೌಮ್ಯ ಪಿ ವಂದಿಸಿದರು.







No comments:

Post a Comment